ಬೆಂಗಳೂರು: ವಿದೇಶಿ ಅಂಚೆ ಕಚೇರಿಗೆ ಬಂದ ಪಾರ್ಸೆಲ್ ನಲ್ಲಿ ಕೋಟ್ಯಾಂತರ ಮೌಲ್ಯದ ಮಾದಕ ವಸ್ತು ಪತ್ತೆ; ಆರೋಪಿಯ ಬಂಧನ

Update: 2022-02-01 12:24 GMT
photo: twitter@blrcustoms
 

ಬೆಂಗಳೂರು, ಫೆ.1: ಜರ್ಮನಿಯಿಂದ ನಗರದ ವಿದೇಶಿ ಅಂಚೆ ಕಚೇರಿಗೆ ಬಂದ ಪಾರ್ಸೆಲ್ ತಪಾಸಣೆ ನಡೆಸಿದಾಗ 1.89 ಕೋಟಿ ಮೌಲ್ಯದ 2.59 ಕೆ.ಜಿ ಎಂಡಿಎಂಎ ಮಾದಕ ವಸ್ತು ಪತ್ತೆಯಾಗಿದೆ.

ಈ ಸಂಬಂಧ ನಗರದ ಕಸ್ಟಮ್ಸ್ ಅಧಿಕಾರಿಗಳು ವಿದೇಶಿ ಪ್ರಜೆಯನ್ನ ಬಂಧಿಸಿ ತೀವ್ರ ವಿಚಾರಣೆ ಮುಂದುವರೆಸಿದ್ದಾರೆ.

ಇದನ್ನೂ ಓದಿ:  ಅಶ್ಲೀಲ ವೆಬ್ ಸೈಟ್ ನಲ್ಲಿ ತನ್ನದೇ 'ಖಾಸಗಿ ವಿಡಿಯೋ' ಪತ್ತೆ: ಯುವಕನಿಂದ ಪೊಲೀಸರಿಗೆ ದೂರು

ಜರ್ಮನಿಯಿಂದ ವಿದೇಶಿ ಅಂಚೆ ಕಚೇರಿಗೆ ಬಂದ ಪಾರ್ಸೆಲ್‍ಗಳನ್ನ ತಪಾಸಣೆ ಮಾಡುವ ಸಮಯದಲ್ಲಿ ಬೆಂಗಳೂರು ಕಸ್ಟಮ್ಸ್ ಅಧಿಕಾರಿಗಳು ಈ ಡ್ರಗ್ಸ್ ಜಾಲವನ್ನ ಪತ್ತೆ ಮಾಡಿದ್ದಾರೆ.

ಮಾತ್ರೆ ರೂಪದ ಮಿಥೈಲ್ ಎಡಿಯಾಕ್ಸಿ ಮೆಥಾಂಫೆಟಮೈನ್ (ಎಂಡಿಎಂಎ) ಡ್ರಗ್ಸ್ ಅನ್ನು ಪಾರ್ಸೆಲ್ ಮೂಲಕ ಬೆಂಗಳೂರಿಗೆ ಕಳಿಸಲಾಗಿತ್ತು. ಸೈಕೋ ಆಕ್ಟಿವ್ ಡ್ರಗ್ ಎಂದು ಕರೆಯಲಾಗುವ ಈ ಡ್ರಗ್ಸ್ ಅನ್ನು ಮನರಂಜನಾ ಉದ್ದೇಶಗಳಿಗೆ ಬಳಕೆ ಮಾಡಲಾಗುತ್ತದೆ ಎಂದು ಹಿರಿಯ ಅಧಿಕಾರಿವೊಬ್ಬರು ತಿಳಿಸಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News