×
Ad

ಯುರಾಲಜಿಕಲ್ ಸೊಸೈಟಿ ಆಫ್ ಇಂಡಿಯಾಕ್ಕೆ ಆಯ್ಕೆ

Update: 2022-02-01 22:00 IST

ಮಂಗಳೂರು, ಫೆ.1: ಮಂಗಳೂರಿನ ಕೆಎಂಸಿ ಆಸ್ಪತ್ರೆಯ ಮೂತ್ರಶಾಸ್ತ್ರಜ್ಞ (ಯುರಾಲಜಿಸ್ಟ್) ಡಾ.ಜಿ.ಜಿ. ಲಕ್ಷ್ಮಣ್ ಪ್ರಭು ಯುರಾಲಜಿ ಸೊಸೈಟಿ ಆಫ್ ಇಂಡಿಯಾದ ಕಾರ್ಯದರ್ಶಿಯಾಗಿ ಚುನಾಯಿತರಾಗಿದ್ದಾರೆ.

ಅಹ್ಮದಾಬಾದ್‌ನಲ್ಲಿ ಇತ್ತೀಚೆಗೆ ನಡೆದ ಸೊಸೈಟಿಯ 55ನೇ ವಾರ್ಷಿಕ ಸಮ್ಮೇಳನದಲ್ಲಿ ಚುನಾವಣಾ ಫಲಿತಾಂಶ ವನ್ನು ಪ್ರಕಟಿಸಲಾಯಿತು.

ಡಾ. ಲಕ್ಷ್ಮಣ್ ಪ್ರಭು ಈ ಹಿಂದೆ ಕರ್ನಾಟಕ ಯುರಾಲಜಿ ಅಸೋಸಿಯೇಷನ್‌ನ ಸದಸ್ಯರಾಗಿ, ಅಧ್ಯಕ್ಷರಾಗಿ, ಅಸೋಸಿಯೇಷನ್ ಆಫ್ ಸದರನ್ (ದಕ್ಷಿಣ) ಯುರಾಲಜಿಸ್ಟ್‌ನ ಕಾರ್ಯದರ್ಶಿಯಾಗಿ, ಯುರಾಲಜಿ ಸೊಸೈಟಿ ಆಫ್ ಇಂಡಿಯಾದ ಕೌನ್ಸಿಲ್ ಸದಸ್ಯರಾಗಿ ಹಾಗೂ ಐಎಂಎ ಮಂಗಳೂರು ಇದರ ಕಾರ್ಯದರ್ಶಿಯಾಗಿ ಸೇವೆ ಸಲ್ಲಿಸಿದ್ದರು.

ಪ್ರಸ್ತುತ ಮಂಗಳೂರಿನ ಕಸ್ತೂರಬಾ ವೈದ್ಯಕೀಯ ಮಹಾವಿದ್ಯಾಲಯದ ಯುರಾಲಜಿ ವಿಭಾಗದ ಮುಖ್ಯಸ್ಥರು ಮತ್ತು ಪ್ರಾಧ್ಯಾಪಕರಾಗಿ ಡಾ. ಜಿ.ಜಿ. ಲಕ್ಷ್ಮಣ್ ಪ್ರಭು ಕರ್ತವ್ಯ ನಿರ್ವಹಿಸುತ್ತಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News