ಜಮ್ಮು ಕಾಶ್ಮೀರ: ಗುಂಡಿನ ಚಕಮಕಿಯಲ್ಲಿ ಉಗ್ರ ಸಾವು

Update: 2022-02-02 16:11 GMT
PHOTO : PTI

ಶ್ರೀನಗರ, ಫೆ. 2: ಜಮ್ಮು ಹಾಗೂ ಕಾಶ್ಮೀರದ ಶೋಪಿಯಾನ ಜಿಲ್ಲೆಯಲ್ಲಿ ಬುಧವಾರ ಬೆಳಗ್ಗೆ ಭದ್ರತಾ ಪಡೆ ಸಿಬ್ಬದಿ ಹಾಗೂ ಶಂಕಿತ ಉಗ್ರರ ನಡುವೆ ನಡೆದ ಗುಂಡಿನ ಚಕಮಕಿಯಲ್ಲಿ ಓರ್ವ ಶಂಕಿತ ಉಗ್ರ ಮೃತಪಟ್ಟಿದ್ದಾನೆ. ಖಚಿತ ಮಾಹಿತಿಯ ಹಿನ್ನೆಲೆಯಲ್ಲಿ ಜಮ್ಮು ಹಾಗೂ ಕಾಶ್ಮೀರ ಪೊಲೀಸ್, ಸೇನೆ ಹಾಗೂ ಅರೆ ಸೇನಾ ಪಡೆಗಳ ಜಂಟಿ ತಂಡ ಬುಧವಾರ ಬೆಳಗ್ಗೆ ಶೋಪಿಯಾನದ ನಾಡಿಗಾಂವ್ ಅನ್ನು ಸುತ್ತುವರಿದು ಕಾರ್ಯಾಚರಣೆ ನಡೆಸಿತ್ತು. ಕಾರ್ಯಾಚರಣೆ ಸಂದರ್ಭ ಅಡಗಿದ್ದ ಶಂಕಿತ ಉಗ್ರರು ಗುಂಡಿನ ದಾಳಿ ನಡೆಸಿದರು ಹಾಗೂ ಪರಾರಿಯಾಗಲು ಪ್ರಯತ್ನಿಸಿದರು. ಜಂಟಿ ಭದ್ರತಾ ಪಡೆ ಪ್ರತಿದಾಳಿ ನಡೆಸಿತು. ಇದರಿಂದ ಗುಂಡಿನ ಚಕಮಕಿ ನಡೆಯಿತು. ಪರಿಣಾಮ ಶಂಕಿತ ಉಗ್ರನೋರ್ವ ಹತನಾದ ಎಂದು ಪೊಲೀಸ್ ಅಧಿಕಾರಿ ತಿಳಿಸಿದ್ದಾರೆ. ಮೃತಪಟ್ಟ ಶಂಕಿತ ಉಗ್ರನ ಗುರುತನ್ನು ಇನ್ನಷ್ಟೇ ಖಚಿತಪಡಿಸಿಕೊಳ್ಳಬೇಕಾಗಿದೆ. ಶಂಕಿತ ಉಗ್ರರ ವಿರುದ್ಧದ ಕಾರ್ಯಾಚರಣೆ ಮುಂದುವರಿದಿದೆ ಎಂದು ಪೊಲೀಸರು ತಿಳಿಸಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News