×
Ad

ಪದ್ಮಶ್ರೀ ಪುರಸ್ಕೃತ ಮಹಾಲಿಂಗ ನಾಯ್ಕ್ ರಿಗೆ ಕ್ಯಾಂಪಸ್ ಫ್ರಂಟ್ ವಿಟ್ಲ ವತಿಯಿಂದ ಸನ್ಮಾನ

Update: 2022-02-03 11:51 IST

ವಿಟ್ಲ : ಪದ್ಮಶ್ರೀ ಪುರಸ್ಕೃತ  ಅಡ್ಯನಡ್ಕ  ಅಮೈ ಮಹಾಲಿಂಗ ನಾಯ್ಕ್ ರಿಗೆ ಕ್ಯಾಂಪಸ್ ಫ್ರಂಟ್ ವಿಟ್ಲ ವತಿಯಿಂದ ಅವರ ನಿವಾಸದಲ್ಲಿ ಸನ್ಮಾನಿಸಲಾಯಿತು.

ಈ ಸಂದರ್ಭ ಕ್ಯಾಂಪಸ್ ಫ್ರಂಟ್ ವಿಟ್ಲ ಅಧ್ಯಕ್ಷ  ಫಯಾಝ್ ವಿಟ್ಲ ಮಾತನಾಡಿ, ತನಗೆ ಸಿಕ್ಕ ಬರಡು ಭೂಮಿಯನ್ನು ಏಕಾಂಗಿಯಾಗಿ ತನ್ನ ದೈಹಿಕ ಶ್ರಮದ ಮೂಲಕ ಏಳು ಸುರಂಗಗಳನ್ನು ಕೊರೆದು ಪಾಲು ಭೂಮಿಯನ್ನು ಹೊನ್ನಾಗಿ ಮಾರ್ಪಾಡುಗೊಳಿಸಿದ ಶ್ರಮ‌ಜೀವಿ, ಪ್ರಗತಿಪರ ಕೃಷಿಕ ಅಮೈ ಮಹಾಲಿಂಗ ನಾಯ್ಕ್ ರವರ ಈ ಸಾಧನೆಗೆ ದೇಶದ ಅತ್ಯುನ್ನತ "ಪದ್ಮಶ್ರೀ" ಪ್ರಶಸ್ತಿಗೆ ಆಯ್ಕೆಯಾಗಿರುವುದು ಹೆಮ್ಮೆಯ ಸಂಗತಿಯಾಗಿದ್ದು ತಮ್ಮ ನಾಡಿನ ಕೀರ್ತಿಯನ್ನು ಎತ್ತರಕ್ಕೆ ಏರಿಸಿದ್ದಾರೆ ಎಂದರು.

ಈ ಸಂದರ್ಭದಲ್ಲಿ ಕ್ಯಾಂಪಸ್ ಕಾರ್ಯದರ್ಶಿ ಮುಕ್ತಾರ್ ಕಲ್ಲಡ್ಕ, ವಿಟ್ಲ ವಲಯ ಕಾರ್ಯದರ್ಶಿ ತಷ್ವೀಕ್ ಸದಸ್ಯರಾದ ನವಾಝ್, ಫರಾನ್, ಸಫ್ಪಾಫ್ ಕಲ್ಲಡ್ಕ ಮೊದಲಾದವರು ಉಪಸ್ಥಿತರಿದ್ದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News