ಮೋದಿ ಕಾಶ್ಮೀರದಲ್ಲಿ ಸೇನಾ ಸಮವಸ್ತ್ರ ಧರಿಸಿದ್ದು ದಂಡನೀಯ ಅಪರಾಧ: ಪ್ರಧಾನಿ ಕಚೇರಿಗೆ ಉ.ಪ್ರ.ನ್ಯಾಯಾಲಯದ ನೋಟಿಸ್

Update: 2022-02-03 18:49 GMT

ಹೊಸದಿಲ್ಲಿ,ಫೆ.3: ಪ್ರಧಾನಿ ನರೇಂದ್ರ ಮೋದಿಯವರು ಕಳೆದ ವರ್ಷ ಕಾಶ್ಮೀರಕ್ಕೆ ಭೇಟಿ ನೀಡಿದ್ದ ಸಂದರ್ಭ ಸೇನಾ ಸಿಬ್ಬಂದಿಗಳೊಂದಿಗೆ ಸಂವಾದದ ವೇಳೆ ಭಾರತೀಯ ಸೇನೆಯ ಸಮವಸ್ತ್ರವನ್ನು ಧರಿಸಿದ್ದಕ್ಕಾಗಿ ಉತ್ತರ ಪ್ರದೇಶದ ಪ್ರಯಾಗರಾಜ್ ಜಿಲ್ಲಾ ನ್ಯಾಯಾಲಯವು ಪ್ರಧಾನಿ ಕಚೇರಿಗೆ ನೋಟಿಸನ್ನು ಹೊರಡಿಸಿದೆ.

ವಕೀಲ ರಾಕೇಶನಾಥ್ ಪಾಂಡೆ ಅವರು ಸಲ್ಲಿಸಿರುವ ಅರ್ಜಿಗೆ ಸಂಬಂಧಿಸಿದಂತೆ ಜಿಲ್ಲಾ ನ್ಯಾಯಾಧೀಶ ನಳಿನಕುಮಾರ್‌ ಶ್ರೀವಾಸ್ತವ ಅವರು ಈ ನೋಟಿಸನ್ನು ಹೊರಡಿಸಿದ್ದಾರೆ. ಮೋದಿ ಸಮವಸ್ತ್ರವನ್ನು ಧರಿಸಿದ್ದು ಐಪಿಸಿಯ ಕಲಂ 140ರಡಿ ಕಾನೂನುಬಾಹಿರವಾಗಿದೆ ಮತ್ತು ದಂಡನೀಯ ಅಪರಾಧವಾಗಿದೆ ಎಂದು ಪಾಂಡೆ ಅರ್ಜಿಯಲ್ಲಿ ಹೇಳಿದ್ದಾರೆ.

ಮಾ.2ರಂದು ನ್ಯಾಯಾಲಯವು ವಿಚಾರಣೆಯನ್ನು ನಡೆಸಲಿದೆ.

ಇದಕ್ಕೂ ಮುನ್ನ ಡಿಸೆಂಬರ್‌ನಲ್ಲಿ ಪಾಂಡೆ ಸಲ್ಲಿಸಿದ್ದ ಅರ್ಜಿಯನ್ನು ಮುಖ್ಯ ನ್ಯಾಯಿಕ ಮ್ಯಾಜಸ್ಟ್ರೇಟ್ ಹರೇಂದ್ರ ನಾಥ ಅವರು ತಿರಸ್ಕರಿಸಿದ್ದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News