×
Ad

ಬೆಂಗಳೂರು: ಜೂಜು ಅಡ್ಡೆ ಮೇಲೆ ಸಿಸಿಬಿ ದಾಳಿ; 20 ಲಕ್ಷ ನಗದು ವಶ, ಆರು ಮಂದಿ ಬಂಧನ

Update: 2022-02-04 22:15 IST

ಬೆಂಗಳೂರು, ಫೆ.4: ಸ್ಟಾರ್ ಹೊಟೇಲ್‍ಗಳಲ್ಲಿ ಜೂಜಾಟ ಆಡುತ್ತಿದ್ದ ಅಡ್ಡೆ ಮೇಲೆ ಸಿಸಿಬಿ ಪೊಲೀಸರು ದಾಳಿ ನಡೆಸಿ ಆರು ಮಂದಿ ಆರೋಪಿಗಳನ್ನು ಬಂಧಿಸಿ, 20 ಲಕ್ಷ ರೂ.ಮೌಲ್ಯದ ನಗದು ವಶಪಡಿಸಿಕೊಂಡಿದ್ದಾರೆ. 

ಬಂಧಿತರನ್ನು ಉದಯ್ ಶೆಟ್ಟಿ, ನಟರಾಜ್, ಸುರೇಶ್ ರಾಮಕೃಷ್ಣ, ಕೃಷ್ಣಗೌಡ ಹಾಗೂ ಶಂಕರ್ ಎಂದು ಗುರುತಿಸಲಾಗಿದೆ. ದಾಳಿ ವೇಳೆ ಪೊಲೀಸರು 20 ಲಕ್ಷ ಮೌಲ್ಯದ ನಗದು, ಒಂದು ವೇಯಿಂಗ್ ಮಿಷಿನ್ ಹಾಗೂ ಕಾರ್ಡ್‍ಗಳನ್ನು ಜಪ್ತಿ ಮಾಡಿಕೊಂಡಿದ್ದಾರೆ.

ಬಂಧಿತ ಆರೋಪಿಗಳೆಲ್ಲರೂ ಹಲವು ತಿಂಗಳಿಂದ ರೇಸ್ ಕೋರ್ಸ್ ರಸ್ತೆಯಲ್ಲಿರುವ ಫೈವ್‍ಸ್ಟಾರ್ ಹೊಟೇಲ್‍ನಲ್ಲಿ ಐಷರಾಮಿ ರೂಂ ಬುಕ್ ಮಾಡಿಕೊಂಡು ಇಸ್ಟೀಟ್ ಆಡುತ್ತಿದ್ದರು. ಇದರಲ್ಲಿ ಭಾಗಿಯಾದ ಹಲವರು ನಿವೃತ್ತ ಸರಕಾರಿ ಅಧಿಕಾರಿಗಳೂ ಸೇರಿ ವಿವಿಧ ಕ್ಷೇತ್ರಗಳಲ್ಲಿರುವವರು ಎಂದು ತಿಳಿದು ಬಂದಿದೆ.

ಜೂಜಾಟ ಆಡುತ್ತಿರುವ ಬಗ್ಗೆ ಹೊಟೇಲ್‍ನವರಿಗೆ ಮಾಹಿತಿ ಇದೆಯಾ ಎಂಬುದರ ಬಗ್ಗೆ ತನಿಖೆ ನಡೆಸುತ್ತಿರುವುದಾಗಿ ಸಿಸಿಬಿ ಡಿಸಿಪಿ ಶರಣಪ್ಪ ತಿಳಿಸಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News