×
Ad

ದೇಲಂಪಾಡಿ-ಪಂಜಿಕಲ್ಲು ರಸ್ತೆಯಲ್ಲಿ ಚಿರತೆ ಪ್ರತ್ಯಕ್ಷ!

Update: 2022-02-04 22:18 IST

ಸುಳ್ಯ : ದೇಲಂಪಾಡಿ-ಪಂಜಿಕಲ್ಲು ರಸ್ತೆಯಲ್ಲಿ ಚಿರತೆ ಪ್ರತ್ಯಕ್ಷವಾಗಿದೆ. ಕಳೆದ ರಾತ್ರಿ ರಸ್ತೆಯಲ್ಲಿ ಪ್ರಯಾಣಿಸುತ್ತಿದ್ದ ಕಾರು ಯಾತ್ರಿಕರಿಗೆ ಚಿರತೆಯೊಂದು ಕಂಡು ಬಂದಿದ್ದು, ಅವರು ಮೊಬೈಲ್‍ನಲ್ಲಿ ಚಿತ್ರೀಕರಿಸಿದ ಚಿರತೆಯ ವೀಡಿಯೊ ವೈರಲ್ ಆಗಿದೆ.

ಕಾರು ಚಲಿಸುವಾಗ ಕಾಡಿನ ಕಡೆಗೆ ಓಡಿದೆ. ಕೆಲವು ದಿನಗಳ ಹಿಂದೆಯೂ ಚಿರತೆ ಕಂಡು ಬಂದಿದ್ದು, ಎರಡು ಚಿರತೆಗಳು ಇರುವ ಬಗ್ಗೆ ಶಂಕೆ ಉಂಟಾಗಿದೆ. ದೇಲಂಪಾಡಿಯಿಂದ ಪಂಜಿಕಲ್ಲು ರಸ್ತೆಯಾಗಿ ಮಾಪಳಡ್ಕ ಉರೂಸ್‍ಗೆ ಹೋಗುವವರು ಬನಾರಿ ಬಳಿಯಲ್ಲಿ ಚಿರತೆಯನ್ನು ನೋಡಿದ್ದಾರೆ. ಕಾರನ್ನು ನಿಲ್ಲಿಸಿದ ಇವರು ಮೊಬೈಲ್‍ನಲ್ಲಿ ಚಿತ್ರೀಕರಿಸಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News