ಫೆ.6ರಿಂದಪುಣ್ಯ ಸ್ಮರಣಿಕೆಗಳ ಹಬ್ಬದ ನೊವೆನಾ ಆರಂಭ
Update: 2022-02-05 22:51 IST
ಮಂಗಳೂರು, ಫೆ.5: ನಗರದಜೆಪ್ಪು ಸಂತ ಆಂತೋನಿ ಆಶ್ರಮದ ವತಿಯಿಂದ ಪುಣ್ಯ ಸ್ಮರಣಿಕೆಗಳ ಹಬ್ಬದ ಅಂಗವಾಗಿ ನವ ದಿನಗಳ ನೋವೆನಾ ಪ್ರಾರ್ಥನೆಗಳಿಗೆ ಮಿಲಾಗ್ರಿಸ್ ಚರ್ಚಿನಲ್ಲಿ ಫೆ.6ರಂದು ಸಂಜೆ 5:45ಕ್ಕೆ ಚಾಲನೆ ಸಿಗಲಿದೆ.
ಮಂಗಳೂರು ಧರ್ಮಪ್ರಾಂತದ ಶ್ರೇಷ್ಠ ಗುರು ಮೊನ್ಸಿಂಜೊರ್ ಮ್ಯಾಕ್ಸಿಂ ನೊರೊನ್ಹಾ ಮಿಲಾಗ್ರಿಸ್ ದೇವಾಲಯ ದಲ್ಲಿ ಧ್ವಜಾರೋಹಣದ ಮೂಲಕ ಉದ್ಘಾಟಿಸಲಿದ್ದಾರೆ. ನಂತರ ಬಲಿಪೂಜೆ ಅರ್ಪಿಸಿ ಮೊದಲ ದಿನದ ನೊವೆನಾ ಪ್ರಾರ್ಥನೆ ನಡೆಸಿಕೊಡಲಿದ್ದಾರೆ. ಒಂಬತ್ತು ದಿನಗಳ ನೊವೆನಾ ಪ್ರಾರ್ಥನೆಯಲ್ಲಿ ವ್ಯಾಸ್ತರು, ನಿರುದ್ಯೋಗಿಗಳು, ಚಿಕ್ಕ ಮಕ್ಕಳು, ಯುವಜನರು, ಕಾರ್ಮಿಕರ ಸಹಿತ ನಾನಾ ವರ್ಗದ ಜನರಿಗಾಗಿ ಪ್ರಾರ್ಥನೆ ಸಲ್ಲಿಸಲಾಗುತ್ತದೆ. ಪ್ರತಿನಿತ್ಯ ಅತಿಥಿ ಧರ್ಮಗುರುಗಳು ಬಲಿಪೂಜೆ ಅರ್ಪಿಸಿ ನೊವೆನಾ ಪ್ರಾರ್ಥನೆ ನಡೆಸಿ ಕೊಡಲಿದ್ದಾರೆ. ನಗರದ ಸುತ್ತುಮುತ್ತಲಿನ ಧರ್ಮಕೇಂದ್ರಗಳಿಂದ ಗಾಯನ ಪಂಗಡದವರು ಭಕ್ತಿಗೀತೆಗಳನ್ನು ಹಾಡಲಿದ್ದಾರೆ ಎಂದು ಪ್ರಕಟನೆ ತಿಳಿಸಿದೆ.