ಹಿಜಾಬ್ ವಿವಾದ; ರಾಜ್ಯ ಸರಕಾರ ಸಮಸ್ಯೆ ಬಗೆಹರಿಸಲಿ: ಮುಸ್ಲಿಂ ಒಕ್ಕೂಟ
ಮಂಗಳೂರು, ಫೆ.6: ಹಿಜಾಬ್ ಮುಸ್ಲಿಮ್ ಮಹಿಳೆಯರ ಧಾರ್ಮಿಕ, ಸಾಂವಿಧಾನಿಕ ಮೂಲ ಭೂತ ಹಕ್ಕು ಆಗಿದೆ. ಯಾವುದೇ ಬೆಲೆ ತೆತ್ತಾದರೂ ಸರಿ ಅದನ್ನು ರಕ್ಷಿಸಲಾಗುವುದು ಎಂದು ದ.ಕ.ಜಿಲ್ಲಾ ಮುಸ್ಲಿಂ ಒಕ್ಕೂಟದ ಅಧ್ಯಕ್ಷ ಕೆ.ಅಶ್ರಫ್ ತಿಳಿಸಿದ್ದಾರೆ.
ಉಡುಪಿ ಮತ್ತಿತರ ಕಡೆ ಕೆಲವು ಸರಕಾರಿ ಶಿಕ್ಷಣ ಸಂಸ್ಥೆಗಳಲ್ಲಿ ಮುಸ್ಲಿಂ ವಿದ್ಯಾರ್ಥಿನಿಯರು ಹಿಜಾಬ್ ಧರಿಸು ವುದಕ್ಕೆ ವಿರೋಧ ವ್ಯಕ್ತಪಡಿಸುತ್ತಿರುವುದು ಖಂಡನೀಯ. ಸ್ಕಾರ್ಫ್‌ನ ಬಗ್ಗೆ ತೀರಾ ಅನಗತ್ಯವಾದ ವಿವಾದವನ್ನು ಸೃಷ್ಟಿಸಿ ವಿದ್ಯಾರ್ಥಿಗಳ ಮನಸ್ಸಿನಲ್ಲಿ ಕೋಮು ವಿಷಬೀಜವನ್ನು ಬಿತ್ತುವ ಹುನ್ನಾರ ನಡೆಯುತ್ತಿರುವುದು ವಿಷಾದನೀಯ. ಮುಸ್ಲಿಂ ವಿದ್ಯಾರ್ಥಿನಿಯರ ಶಿಕ್ಷಣಕ್ಕೆ ತಡೆಯೊಡ್ಡುವ ಈ ಷಡ್ಯಂತ್ರವನ್ನು ಸಹಿಸಲು ಸಾಧ್ಯವಿಲ್ಲ. ಈ ವಿವಾದವನ್ನು ಸರಕಾರ ಕೂಡಲೇ ಬಗೆಹರಿಸಬೇಕು. ಸಂವಿಧಾನ ಬದ್ಧವಾದ ಹಿಜಾಬ್ ಧರಿಸುವ ಪ್ರಕ್ರಿಯೆಗೆ ತಡೆಯೊಡ್ಡುವವರ ಮೇಲೆ ಕಾನೂನು ಕ್ರಮ ಕೈಗೊಳ್ಳಬೇಕು. ಶಿಕ್ಷಣ ಸಂಸ್ಥೆಗಳಲ್ಲಿ ಸೌಹಾರ್ದ ವಾತಾವರಣ ಮುಂದುವರಿಸಿಕೊಂಡು ಹೋಗಬೇಕು ಎಂದು ಆಗ್ರಹಿಸಿದ್ದಾರೆ.