ಕೆತ್ತಿಕಲ್: ಕಮರಿಗೆ ಉರುಳಿದ ಕಾರುಗಳು
Update: 2022-02-06 22:34 IST
ಮಂಗಳೂರು, ಫೆ.6: ರಾ. ಹೆ.169ರ ವಾಮಂಜೂರು ಸಮೀಪದ ಕೆತ್ತಿಕ್ಕಲ್ ಎಂಬಲ್ಲಿ ಎರಡು ಕಾರುಗಳು ಕಮರಿಗೆ ಉರುಳಿದ ಘಟನೆ ರವಿವಾರ ನಡೆದಿದ್ದು, ಒಬ್ಬರಿಗೆ ಗಾಯವಾಗಿದೆ.
ಕಡಿದಾದ ತಿರುವು ಪ್ರದೇಶದಲ್ಲಿ ಚಲಿಸುತ್ತಿದ್ದ ಎರಡು ಕಾರುಗಳು ಚಾಲಕರ ನಿಯಂತ್ರಣ ತಪ್ಪಿಕಮರಿಗೆ ಉರುಳಿದೆ ಎಂದು ಸ್ಥಳೀಯರು ಮಾಹಿತಿ ನೀಡಿದ್ದಾರೆ.
ಗಾಯಾಳುವನ್ನು ನಗರದ ಖಾಸಗಿ ಆಸ್ಪತ್ರೆಗೆ ದಾಖಲಿಸಲಾಗಿದೆ. ಗುರುಪುರ ಕೈಕಂಬದಿಂದ ಮಂಗಳೂರಿನತ್ತ ಸಾಗುತ್ತಿದ್ದಾಗ, ಓವರ್ ಟೇಕ್ ಭರಾಟೆಯಲ್ಲಿದ್ದ ಕಾರುಗಳು ರಸ್ತೆಯಿಂದ ಕಮರಿಗೆ ಉರುಳಿವೆ ಎಂದು ತಿಳಿದುಬಂದಿದೆ.
ಕಂಕನಾಡಿ ಗ್ರಾಮಾಂತರ ಠಾಣೆ ಪೊಲೀಸರು ತನಿಖೆ ನಡೆಸಿದ್ದಾರೆ.