×
Ad

ಉಷಾ ಮಂಗೇಶ್ಕರ್ ಗೆ ದೂರವಾಣಿ ಕರೆ ಮಾಡಿ ಸಿಎಂ ಬೊಮ್ಮಾಯಿ ಸಾಂತ್ವಾನ

Update: 2022-02-06 22:36 IST

ಬೆಂಗಳೂರು, ಫೆ. 6: ಗಾಯಕಿ ಲತಾ ಮಂಗೇಶ್ಕರ್ ಅವರ ಸಹೋದರಿ ಉಷಾ ಮಂಗೇಶ್ಕರ್ ಅವರೊಂದಿಗೆ ದೂರವಾಣಿ ಮೂಲಕ ಮಾತನಾಡಿದ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರು ಸಾಂತ್ವಾನ ಹೇಳಿದ್ದಾರೆ.

ಲತಾ ಮಂಗೇಶ್ಕರ್ ಅವರು ಭಾರತದ ನೈಟಿಂಗೇಲ್. ಹಲವು ತಲೆಮಾರುಗಳ ಜನರ ಉಸಿರಿನ ಜೊತೆ ಲತಾ ಮಂಗೇಶ್ಕರ್ ಜೀವಂತವಾಗಿರುತ್ತಾರೆ. ದೇಶದ ಜನರ ಮನಸಿನಲ್ಲಿ ಲತಾ ಮಂಗೇಶ್ಕರ್ ವಿಶೇಷ ಸ್ಥಾನ ಪಡೆದಿದ್ದಾರೆ. ಅಂಥ ಮಹಾನ್ ಗಾಯಕಿಯನ್ನು ನಾವು ಕಳೆದುಕೊಂಡಿದ್ದೇವೆ. ಕರ್ನಾಟಕದಲ್ಲಿ ಲತಾ ನಿಧನದ ಹಿನ್ನೆಲೆಯಲ್ಲಿ ಶೋಕಾಚರಣೆಗೆ ಆದೇಶಿಸಲಾಗಿದೆ ಎಂದು ಉಷಾ ಮಂಗೇಶ್ಕರ್‍ಗೆ ಬಸವರಾಜ ಬೊಮ್ಮಾಯಿ ತಿಳಿಸಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News