×
Ad

ಉಳ್ಳಾಲ ಉರೂಸ್ ಯಶಸ್ವಿಗೊಳಿಸಲು ದರ್ಗಾ ಅಧ್ಯಕ್ಷ ಹಾಜಿ ಅಬ್ದುಲ್ ರಶೀದ್ ಮನವಿ

Update: 2022-02-07 17:14 IST

ಉಳ್ಳಾಲ :  ಉಳ್ಳಾಲ ಹಝ್ರತ್ ಸೈಯ್ಯದ್ ಮದನಿ (ಖ.ಸ )ರವರ ಇಪ್ಪತ್ತೊಂದನೇ ಉರೂಸ್ ಸಮಾರಂಭವು ಫೆ. 10ರಿಂದ ಆರಂಭವಾಗಿ ಮಾ.6ರವರೆಗೆ ನಡೆಯಲ್ಲಿದ್ದು ನಾಡಿನ  ಸಂಘ-ಸಂಸ್ಥೆಗಳ ಪದಾಧಿಕಾರಿಗಳು ಮತ್ತು ಸದಸ್ಯರು ಹಾಗೂ ಉದ್ಯಮಿ ಹಿತೈಷಿಗಳು ಉರೂಸಿನ ಕಾರ್ಯಕ್ರಮದಲ್ಲಿ ಪಾಲ್ಗೊಂಡು ಅಗತ್ಯ ಸಹಕಾರ ನೀಡಿ ಉರೂಸಿನ ಯಶಸ್ವಿಗೆ ಕಾರಣರಾಗಬೇಕೆಂದು ಉಳ್ಳಾಲ ದರ್ಗಾ ಅಧ್ಯಕ್ಷ  ಹಾಜಿ ಅಬ್ದುಲ್ ರಶೀದ್  ಮನವಿ ಮಾಡಿದ್ದಾರೆ.

ಈ ಹಿಂದೆ ನಿಗದಿಯಾದ ಉರೂಸ್ ಕಾರ್ಯಕ್ರಮಗಳ ದಿನಾಂಕವನ್ನು ಸರಕಾರದ ಆದೇಶದ ಮೇರೆಗೆ ಎರಡು ಬಾರಿ ಮುಂದೂಡಬೇಕಾಗಿ ಬಂದ ಕಾರಣ  ಮುಖಃತಾ ಕಂಡು  ಆಹ್ವಾನಿಸಲು ಸಮಯಾವಕಾಶ ಕಡಿಮೆ ಇದೆ. ಆದ್ದರಿಂದ ಈ ಪತ್ರಿಕಾ ಹೇಳಿಕೆಯನ್ನೇ ಆಹ್ವಾನ ಪತ್ರ ಎಂದು ಭಾವಿಸಿ ಉರೂಸ್ ಸಂಬಂಧಿತ ಎಲ್ಲಾ ಕಾರ್ಯಕ್ರಮಗಳಲ್ಲಿ  ಆಗಮಿಸಿ, ಸಹಕರಿಸ ಬೇಕೆಂದು ಉಳ್ಳಾಲ ದರ್ಗಾ ಅಧ್ಯಕ್ಷರಾದ ಹಾಜಿ ಅಬ್ದುಲ್ ರಶೀದ್ ವಿನಂತಿಸಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News