×
Ad

ಸ್ಕೂಟರ್ ಕಳವು

Update: 2022-02-07 22:49 IST

ಮಂಗಳೂರು, ಫೆ.7: ಕಂಕನಾಡಿ ನಗರ ಪೊಲೀಸ್ ಠಾಣಾ ವ್ಯಾಪ್ತಿಯ ಪಿಜಿಯೊಂದ ಮುಂದೆ ನಿಲ್ಲಿಸಿದ್ದ ಸ್ಕೂಟರ್ ಕಳವಾಗಿರುವ ಬಗ್ಗೆ ಪ್ರಕರಣ ದಾಖಲಾಗಿದೆ.

ದುರ್ಗಾ ಪ್ರಸಾದ್ ಎಂಬವರು ಕೆಎ-21-ಇಬಿ-4505 ಸಂಖ್ಯೆಯ 2021ನೇ ಮಾಡೆಲ್‌ನ ಡಿಯೋ ಮ್ಯಾಟ್ ಗ್ರೇ ಕಲರ್‌ನ ಸ್ಕೂಟರ್‌ನ್ನು ಜ.30ರಂದು ರಾತ್ರಿ 10:30ಕ್ಕೆ ಅವರು ವಾಸವಾಗಿರುವ ಪಿಜಿಯ ಎದುರು ನಿಲ್ಲಿಸಿ ಮರುದಿನ ಬೆಳಗ್ಗೆ 10ಕ್ಕೆ ನೋಡಿದಾಗ ಸ್ಕೂಟರ್‌ ಕಳವು ಮಾಡಿಕೊಂಡು ಹೋಗಿರುವುದಾಗಿ ದೂರು ನೀಡಲಾಗಿದೆ.

ಕಳವಾದ ಸ್ಕೂಟರ್‌ನ ಅಂದಾಜು ಮೌಲ್ಯ 40,000 ರೂ.ಗಳು ಎಂದು ದೂರಿನಲ್ಲಿ ತಿಳಿಸಲಾಗಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News