×
Ad

ಬಂಟ್ವಾಳ; ಸಾಲ ಪಾವತಿಗೆ ಒತ್ತಡ: ಸ್ವಂತ ಬೈಕ್ ಗೆ ಬೆಂಕಿ ಹಚ್ಚಿದ ವ್ಯಕ್ತಿ

Update: 2022-02-07 23:01 IST

ಬಂಟ್ವಾಳ, ಫೆ.7: ಸಾಲ ಪಾವತಿಸುವಂತೆ ಫೈನಾಸ್ ನವರು ಒತ್ತಡ ಹಾಕಿದ ಕಾರಣಕ್ಕೆ ವ್ಯಕ್ತಿಯೊಬ್ಬ ತನ್ನ ಸ್ವಂತ ಬೈಕ್ ಗೆ ಬೈಕ್ ಶೋ ರೂಂ ಎದುರೇ ಬೆಂಕಿ ಹಚ್ಚಿ ಸುಟ್ಟು ಹಾಕಿರುವ ಘಟನೆ ಸೋಮವಾರ ಬಿ.ಸಿ.ರೋಡ್ ಕೈಕಂಬ ಸಮೀಪ ನಡೆದಿದೆ.  

ಫರಂಗಿಪೇಟೆ ನಿವಾಸಿ ಮುಹಮ್ಮದ್ ಹರ್ಷಾದ್ ಬೈಕ್ ಗೆ ಪೆಟ್ರೋಲ್ ಸುರಿದು ಬೆಂಕಿ ಹಚ್ಚಿದ ವ್ಯಕ್ತಿ ಎನ್ನಲಾಗಿದೆ. 

ಹರ್ಷಾದ್ ಫೈನಾನ್ಸ್ ನಿಂದ ಸಾಲ ಮಾಡಿ ಬೈಕ್ ಕೊಂಡುಕೊಂಡಿದ್ದು ಸಾಲದ ಕಂತು ಪಾವತಿ ಮಾಡಿಲ್ಲ ಎಂಬ ಕಾರಣಕ್ಕೆ ಫೈನಾನ್ಸ್ ನವರು ಬೈಕ್ ಗೆ ಸಂಬಂಧಿಸಿದ ದಾಖಲೆ ಪತ್ರಗಳನ್ನು ಆತನ ಕೈಯಿಂದ ಪಡೆದು ಸಾಲದ ಪಾವತಿ ಮಾಡುವಂತೆ ತಿಳಿಸಿದ್ದರು.

ಸಾಲದ ಕಂತಿನ ಪಾವತಿಗಾಗಿ ಫೈನಾನ್ಸ್ ನವರು ಕಿರಿಕಿರಿ ಮಾಡುತ್ತಿದ್ದಾರೆ ಎಂಬ ಕಾರಣಕ್ಕಾಗಿ ಇಂದು ಬೈಕ್ ಜೊತೆ ಕೈಕಂಬದ ಬೈಕ್ ಶೋ ರೂಂಗೆ ತೆರಳಿ ಕಚೇರಿಯಲ್ಲಿ ಕೆಲವು ಹೊತ್ತು ಮಾತುಕತೆ ನಡೆಸಿ ಬಳಿಕ ಹೊರಗೆ ಬಂದು ಬೈಕ್ ಗೆ ಪೆಟ್ರೋಲ್ ಸುರಿದು ಬೆಂಕಿ ಹಚ್ಚಿ ಅಲ್ಲಿಂದ ಪರಾರಿಯಾಗಿದ್ದಾನೆ ಎನ್ನಲಾಗಿದೆ.

ಬೈಕ್ ಸಂಪೂರ್ಣ ಬೆಂಕಿಗೆ ಸುಟ್ಟು ಭಸ್ಮವಾಗಿದೆ. ಬಂಟ್ವಾಳ ಅಗ್ನಿಶಾಮಕ ದಳದವರು ಆಗಮಿಸಿ ಬೆಂಕಿ ನಂದಿಸಿದ್ದಾರೆ. ಸ್ಥಳಕ್ಕೆ ಬಂಟ್ವಾಳ ನಗರ ಪೊಲೀಸರು ತೆರಳಿ ಪರಿಶೀಲನೆ ನಡೆಸಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News