ವಿದೇಶಿ ಕರೆನ್ಸಿ ಅಕ್ರಮ ಸಾಗಾಟ ಪತ್ತೆ
Update: 2022-02-08 22:40 IST
ಮಂಗಳೂರು, ಫೆ.8: ಅಕ್ರಮವಾಗಿ ವಿದೇಶಿ ಕರೆನ್ಸಿಗಳ ಸಾಗಾಟವನ್ನು ಕಸ್ಟಮ್ಸ್ ಅಧಿಕಾರಿಗಳು ಮಂಗಳೂರು ವಿಮಾನ ನಿಲ್ದಾಣದಲ್ಲಿ ಸೋಮವಾರ ಮತ್ತು ಮಂಗಳವಾರ ಪತ್ತೆ ಹಚ್ಚಿದ್ದಾರೆ.
ಫೆ.7ರಂದು 7.40 ಲ.ರೂ. ಮೊತ್ತದ ಯುಎಸ್ ಡಾಲರ್ ಹಾಗೂ ಫೆ.8ರಂದು 17.77 ಲ.ರೂ ಮೊತ್ತದ ಯುಎಇ ದಿರ್ ಹಮ್ ನೋಟುಗಳನ್ನು ವಶಪಡಿಸಿ ಪ್ರಕರಣ ದಾಖಲಿಸಿಕೊಳ್ಳಲಾಗಿದೆ ಎಂದು ಕಸ್ಟಮ್ಸ್ ಅಧಿಕಾರಿಗಳು ತಿಳಿಸಿದ್ದಾರೆ.