ಬೆಂಗಳೂರು: ಅಪಾರ್ಟ್‍ಮೆಂಟ್‍ನ ಐದನೇ ಮಹಡಿಯಿಂದ ಜಿಗಿದು ಎಸೆಸೆಲ್ಸಿ ವಿದ್ಯಾರ್ಥಿ ಆತ್ಮಹತ್ಯೆ
Update: 2022-02-08 22:43 IST
ಬೆಂಗಳೂರು, ಫೆ.8: ವಿದ್ಯಾರ್ಥಿಯೋರವ ಅಪಾರ್ಟ್‍ಮೆಂಟ್‍ನ ಐದನೇ ಕಟ್ಟಡದಿಂದ ಜಿಗಿದು ಆತ್ಮಹತ್ಯೆ ಮಾಡಿಕೊಂಡಿರುವ ಘಟನೆ ಇಲ್ಲಿನ ಹೆಬ್ಬಗೋಡಿ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ನಡೆದಿದೆ.
ಇಲ್ಲಿನ ಹೆಬ್ಬಗೋಡಿ ಬಳಿಯ ಕಮ್ಮಸಂದ್ರದ ಡ್ಯಾಡೀಸ್ ಬಡಾವಣೆಯ ಗಾರ್ಡನ್ ಅಪಾರ್ಟ್‍ಮೆಂಟ್‍ನ ಆದಿತ್ಯ ಪಾಟೀಲ್ ಮೃತಪಟ್ಟ ಬಾಲಕ ಎಂದು ಪೊಲೀಸರು ತಿಳಿಸಿದ್ದಾರೆ.
ಬೇಗೂರು ಟ್ರಮೀಸ್ ಶಾಲೆಯ ಪ್ರೌಢಶಾಲೆಯಲ್ಲಿ 10ನೇ ತರಗತಿ ವ್ಯಾಸಂಗ ಮಾಡುತ್ತಿದ್ದ ಆದಿತ್ಯ ಪಾಟೀಲ್, ವೈದ್ಯ ಶರಣುಪಾಟೀಲ್ ಅವರ ಪುತ್ರನಾಗಿದ್ದಾನೆ. ಕಳೆದ ತಿಂಗಳಿನಿಂದ ಮೊಬೈಲ್ ಬಳಕೆಯಲ್ಲಿ ಈತ ನಿರತನಾಗಿದ್ದ.
ಕಳೆದ ಮೂರು ದಿನಗಳಿಂದ 10ನೆ ತರಗತಿಯ ಪರೀಕ್ಷೆ ನಡೆಯುತ್ತಿದೆ. ನಿನ್ನೆಯಷ್ಟೇ ಪರೀಕ್ಷೆಗೆ ಹಾಜರಾಗಿದ್ದ. ಆದರೆ. ಮಂಗಳವಾರ ಏಕಾಏಕಿ ಕಟ್ಟಡದಿಂದ ಜಿಗಿದು ಸಾವನ್ನಪ್ಪಿದ್ದು, ಈ ಸಂಬಂಧ ಪೊಲೀಸರು ತನಿಖೆ ಕೈಗೊಂಡಿದ್ದಾರೆ.