ಮಾಜಿ ಸಚಿವ ಪ್ರಿಯಾಂಕ್ ಖರ್ಗೆ ಪತ್ನಿಯ ಮೊಬೈಲ್ ಕಳವು: ದೂರು
Update: 2022-02-09 13:52 IST
ಬೆಂಗಳೂರು, ಫೆ.8: ಮಾಜಿ ಸಚಿವ ಪ್ರಿಯಾಂಕ್ ಖರ್ಗೆ ಪತ್ನಿ ಶೃತಿ ಅವರ ಮೊಬೈಲ್‍ಅನ್ನು ದುಷ್ಕರ್ಮಿಗಳು ಕಳವು ಮಾಡಿರುವ ಪ್ರಕರಣ ಸದಾಶಿವನಗರ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ನಡೆದಿದೆ.
ರವಿವಾರ ಬೆಳಗ್ಗೆ 6:45 ಸುಮಾರಿಗೆ ಶೃತಿ ಅವರು ವಾಯು ವಿವಾರಕ್ಕೆ ತೆರಳಿದ್ದಾರೆ. ಇದನ್ನು ಗಮನಿಸಿದ ದುಷ್ಕರ್ಮಿಗಳು ಬೈಕ್‍ನಲ್ಲಿ ಹಿಂಬಲಿಸಿ ನಂತರ ಮೊಬೈಲ್‍ಅನ್ನು ಕಿತ್ತುಕೊಂಡು ಪರಾರಿಯಾಗಿದ್ದಾರೆ ಎನ್ನಲಾಗಿದೆ.
ಘಟನೆ ಸಂಬಂಧ ಪ್ರಿಯಾಂಕ್‍ಖರ್ಗೆ ಅವರ ಆಪ್ತ ಸಹಾಯಕ ಪ್ರದೀಪ್ ಎಂಬುವರು ನೀಡಿದ ದೂರಿನನ್ವಯ ಸದಾಶಿವನಗರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.