ಸರಕಾರ ದುಡಿಯುವವರ ಪರವಾಗಿಲ್ಲ: ನಟ ಚೇತನ್ ಅಹಿಂಸಾ

Update: 2022-02-10 16:49 GMT

ಬೆಂಗಳೂರು, ಫೆ.10: ಸರಕಾರವು ಅದಾನಿ, ಅಂಬಾನಿಯಂತಹ ಬಂಡವಾಳಶಾಹಿಗಳ ಪರವಾಗಿದೆಯೇ ಹೊರತು, ದುಡಿಯುವ ಕಾರ್ಮಿಕರ ಪರವಾಗಿಲ್ಲ ಎಂದು ಸಾಮಾಜಿಕ ಹೋರಾಟಗಾರ ಹಾಗೂ ನಟ ಚೇತನ್ ಅಹಿಂಸಾ ಆರೋಪಿಸಿದ್ದಾರೆ. 

ಗುರವಾರ ನಗರದ ಕೆ.ಆರ್.ಪುರಂನಲ್ಲಿ ಐಟಿಐ ಕಾರ್ಮಿಕರ ಮುಷ್ಕರಕ್ಕೆ ಬೆಂಬಲ ನೀಡಿ, ಮಾತನಾಡಿದ ಅವರು, ಇಂದು ದೇಶದಲ್ಲಿ ಕಾರ್ಮಿಕರ ಮೇಲೆ ಬಂಡವಾಳಶಾಹಿ ಮತ್ತು ಬ್ರಾಹ್ಮಣ್ಯ ವ್ಯವಸ್ಥೆಯು ದಬ್ಬಾಳಿಕೆ ಮಾಡುತ್ತಿದೆ. ಇದನ್ನು ಖಂಡಿಸಿ, ಎಲ್ಲಾ ಸಂಘಟನೆಗಳು ಪ್ರತಿಭಟಿಸಬೇಕು. ಕೇವಲ ಸಂಘ ಕಟ್ಟಿ ನ್ಯಾಯ ಕೇಳಿದ್ದರಿಂದ ಆಡಳಿತ ಮಂಡಳಿಯು 80 ಕಾರ್ಮಿಕರನ್ನು ವಜಾ ಮಾಡಿರುವುದು ಖಂಡನಾರ್ಹ ಎಂದು ದೂರಿದರು. 

ರಾಜ್ಯದಲ್ಲಿರುವ ಮುಖ್ಯವಾಹಿನಿಯಲ್ಲಿರುವ ರಾಜಕೀಯ ಪಕ್ಷಗಳ ಜೆಂಡಾ ಬೇರೆಬೇರೆ ಇರಬಹುದು ಅವರ ಅಜೆಂಡ ಮಾತ್ರ ಒಂದೇ ಆಗಿದೆ. ಅವರು ಕಾರ್ಮಿಕ, ರೈತ, ದಲಿತ ಸೇರಿದಂತೆ ಅಲ್ಪಸಂಖ್ಯಾತರ ಮೇಲೆ ದಬ್ಬಾಳಿಕೆ ಮಾಡಿ ರಾಜಕೀಯ ಲಾಭ ಪಡೆಯುವುದೇ ಆಗಿದೆ ಎಂದು ಹೇಳಿದರು.  

ಸ್ಯಾಸ್‍ಮೋಸ್ ಕಾರ್ಖಾನೆಯ ಕಾರ್ಮಿಕ ಚಂದ್ರಶೇಖರ್ ಮಾತನಾಡಿ, ಸ್ಯಾಸ್‍ಮೋಸ್ ಕಾರ್ಖಾನೆಯ ಕಾರ್ಮಿಕರು ಕಳೆದ 10 ತಿಂಗಳಿನಿಂದ ಪ್ರತಿಭಟನೆಯನ್ನು ಮಾಡುತ್ತಿದ್ದೂ, ಆಡಳಿತ ಮಂಡಳಿಯು ಯಾವುದೇ ಕ್ರಮವನ್ನು ತೆಗೆದುಕೊಳ್ಳುತ್ತಿಲ್ಲ ಎಂದು ಬೇಸರ ವ್ಯಕ್ತಪಡಿಸಿದರು. 

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News