×
Ad

ಮಂಗಳೂರು ನೆಹರೂ ಮೈದಾನ ಫುಟ್ಬಾಲ್ ಗ್ರೌಂಡ್ ಗೆ ಎನ್.ಎ.ಹಾರಿಸ್ ಭೇಟಿ

Update: 2022-02-12 22:24 IST

ಮಂಗಳೂರು : ದ.ಕ.ಜಿಲ್ಲಾ ಫುಟ್ಬಾಲ್ ಸಂಸ್ಥೆಯ ಆಶ್ರಯದಲ್ಲಿ ನಡೆಯುತ್ತಿರುವ ಲೀಗ್ ಪಂದ್ಯಾವಳಿಯನ್ನು ವೀಕ್ಷಿಸಲು ಕರ್ನಾಟಕ ರಾಜ್ಯ ಫುಟ್ಬಾಲ್ ಸಂಸ್ಥೆಯ ಅಧ್ಯಕ್ಷ ರಾದ ಎನ್.ಎ.ಹಾರಿಸ್ ಭೇಟಿ ನೀಡಿ ಜಿಲ್ಲಾ ಫುಟ್ಬಾಲ್ ಸಂಸ್ಥೆಯ ಕಾರ್ಯ ಚಟುವಟಿಕೆಗಳ ಬಗ್ಗೆ ಪರಿಶೀಲನೆ ನಡೆಸಿ ರಾಜ್ಯ, ರಾಷ್ಟ್ರೀಯ ಮಟ್ಟದ ಆಟಗಾರರನ್ನು ತಯಾರು ಮಾಡಲು ಹೆಚ್ಚಿನ ಮುತುವರ್ಜಿ ವಹಿಸಲು ತಿಳಿಸಿದರು.

ಈ ಸಂದರ್ಭದಲ್ಲಿ ಜಿಲ್ಲಾ ಫುಟ್ಬಾಲ್ ಸಂಸ್ಥೆ ಯ ಅಧ್ಯಕ್ಷರಾದ ಡಿ.ಎಂ.ಅಸ್ಲಂ, ರಾಜ್ಯ ಫುಟ್ಬಾಲ್ ಸಂಸ್ಥೆಯ ಸದಸ್ಯ ವಿಜಯ ಸುವರ್ಣ, ಜಿಲ್ಲಾ ಫುಟ್ಬಾಲ್ ಸಂಸ್ಥೆಯ ಕಾರ್ಯದರ್ಶಿ ಹುಸೇನ್ ಬೋಳಾರ, ಖಜಾಂಚಿ ಅನಿಲ್ ಪಿ.ವಿ,ರಾಜ್ಯ ಫುಟ್ಬಾಲ್ ಸಂಸ್ಥೆಯ ಕೋಚ್ ಬಿಬಿ ಥಾಮಸ್, ಫಯಾಝ್, ಖಾಲಿದ್, ಫಿರೋಝ್, ಹರಿಶ್ಚಂದ್ರ ಬೆಂಗರೆ, ಆರಿಫ್ ಉಚ್ಚಿಲ, ಅಬ್ದುಲ್ ಸಲಾಂ ಮುಂತಾದವರು ಹಾಜರಿದ್ದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News