ಉಳ್ಳಾಲ ಧಾರ್ಮಿಕ ಶಿಕ್ಷಣ ಕೇಂದ್ರ ದೇಶಕ್ಕೆ ಮಾದರಿಯಾಗಿದೆ: ಸೈಯದ್ ಜುಮಲುಲ್ಲೈಲಿ ತಂಙಳ್
ಉಳ್ಳಾಲ, ಉಳ್ಳಾಲ ಧಾರ್ಮಿಕ ಶಿಕ್ಷಣ ಕೇಂದ್ರ ಉತ್ತಮ ಧಾರ್ಮಿಕ ಪಾಂಡಿತ್ಯವನ್ನು ಹೊಂದಿರುವ ಪಂಡಿತರ ನೇತೃತ್ವದಲ್ಲಿ ಬೆಳೆದು ದೇಶಕ್ಕೆ ಮಾದರಿಯಾಗಿದೆ ಎಂದು ಸೈಯದ್ ಜುಮಲುಲ್ಲೈಲಿ ತಂಙಳ್ ಕಾಜೂರು ಅಭಿಪ್ರಾಯ ಪಟ್ಟರು.
ಅವರು ಉಳ್ಳಾಲದಲ್ಲಿ ಸೆಯ್ಯದ್ ಮದನಿ ತಂಙಳ್ ರವರ 429 ನೇ ವಾರ್ಷಿಕ ಹಾಗೂ 21 ಪಂಚ ವಾರ್ಷಿಕ ಉರೂಸ್ ಪ್ರಯುಕ್ತ ನಡೆಯುವ ಧಾರ್ಮಿಕ ಉಪನ್ಯಾಸ ಕಾರ್ಯಕ್ರಮ ವನ್ನು ಶನಿವಾರ ಉದ್ಘಾಟಿಸಿ ಮಾತನಾಡಿದರು.
ನಾನು ಉಳ್ಳಾಲದಲ್ಲಿಯೇ ಶಿಕ್ಷಣ ಪಡೆದಿದ್ದೇನೆ. ಇಲ್ಲಿನ ಧರ್ಮ ಗುರುಗಳ ಪಾಂಡಿತ್ಯ ನನಗೆ ಅರ್ಥ ಮಾಡಿಕೊಳ್ಳಲು ಸಾಧ್ಯ ಆಗಿದೆ ಎಂದರು.
ದರ್ಗಾ ಅಧ್ಯಕ್ಷ ಅಬ್ದುಲ್ ರಶೀದ್ ಪ್ರಾಸ್ತಾವಿಕವಾಗಿ ಮಾತನಾಡಿ , ದರ್ಗಾ ಉರೂಸ್ ನಾವು ಒಗ್ಗಟ್ಟಿನಿಂದ ಮಾಡಬೇಕು. ನೋಟಿಸ್ ನಲ್ಲಿ ಹೆಸರಿಲ್ಲ , ಸಮಿತಿಯಲ್ಲಿ ಹೆಸರಿಲ್ಲ ಎಂದು ಗೊಂದಲ ನಿರ್ಮಾಣ ಮಾಡದೇ ಕಾರ್ಯಕ್ರಮ ಯಶಸ್ವಿ ಗೊಳಿಸಲು ಎಲ್ಲರೂ ಸಹಕಾರ ನೀಡಬೇಕು ಎಂದು ಕರೆ ನೀಡಿದರು.
ಕಾರ್ಯಕ್ರಮ ದಲ್ಲಿ ಸೆಯ್ಯದ್ ಇಂಬಿಚ್ಚಿ ಕೋಯ ತಂಙಳ್ ದುಆ ನೆರವೇರಿಸಿದರು. ಸಮೀರ್ ದಾರಿಮಿ ಕೊಲ್ಲಂ ಧಾರ್ಮಿಕ ಉಪನ್ಯಾಸ ನೀಡಿದರು.
ಈ ಸಂದರ್ಭದಲ್ಲಿ ಅರೆಬಿಕ್ ಕಾಲೇಜಿನ ವಿದ್ಯಾರ್ಥಿಗಳು ಹೊರ ತಂದ 'ಔಲಿಯಾ ವಿಸ್ಮಯ ಜಗತ್ತು 'ಸ್ಮರಣ ಸಂಚಿಕೆಯನ್ನು ಬಿಡುಗಡೆ ಮಾಡಲಾಯಿತು. ಉಸ್ಮಾನ್ ಫೈಝಿ ತೋಡಾರ್, ನೌಶಾದ್ ಅಹ್ಸನಿ, ಜುನೈದ್ ತಂಙಳ್, ಇಬ್ರಾಹಿಂ ಮದನಿ, ಇಬ್ರಾಹಿಂ ಅಹ್ಸನಿ, ಮುನೀರ್ ಹುದವಿ, ಆದಂ ಫೈಝಿ, ದರ್ಗಾ ಉಪಾಧ್ಯಕ್ಷ ಮೋನು ಇಸ್ಮಾಯಿಲ್, ಮಾಧ್ಯಮ ಉಸ್ತುವಾರಿ ಫಾರೂಕ್ ಉಳ್ಳಾಲ್, ಆಸೀಫ್ ಅಬ್ದುಲ್ಲಾ, ಅರೆಬಿಕ್ ಟ್ರಸ್ಟ್ ಉಪಾಧ್ಯಕ್ಷ ಅಬೂಬಕ್ಕರ್ ಹಾಜಿ ಕೋಟೆಪುರ,ಎ.ಕೆ.ಮೊಯ್ದಿನ್ ಹಾಜಿ, ಮೊಯ್ದಿನಬ್ಬ ಆಝಾದ್ ನಗರ, ಹಮೀದ್ ಕೋಡಿ, ಯೂಸುಫ್ ಸಿದ್ದೀಕ್ ಕೋಟೆಪುರ, ಆಲಿ ಮುಸ್ಲಿಯಾರ್,ಅಬ್ದುಲ್ ಮಜೀದ್ ಸಿತಾರ್, ಅಬ್ದುಲ್ ರಹಿಮಾನ್ ತಬೂಕು ದಾರಿಮಿ, ಕೇಂದ್ರ ಜುಮ್ಮಾ ಮಸೀದಿ ಇಮಾಮ್ ಅನ್ವರ್ ಅಲಿ ದಾರಿಮಿ , ಯೂಸುಫ್ ಉಳ್ಳಾಲ,ಉಪಸ್ಥಿತರಿದ್ದರು.
ಕೇಂದ್ರ ಜುಮಾ ಮಸೀದಿ ಇಮಾಮ್ ಅನ್ವರ್ ಅಲಿ ದಾರಿಮಿ ಸ್ವಾಗತಿಸಿದರು.