×
Ad

ದ್ವಿತೀಯ ಪಿಯುಸಿ: ಎ.21ಕ್ಕೆ ಉರ್ದು, ಎ.29ಕ್ಕೆ ಅರೇಬಿಕ್ ಪರೀಕ್ಷೆ

Update: 2022-02-12 23:52 IST

ಬೆಂಗಳೂರು, ಫೆ.12: 2021-22ನೇ ಸಾಲಿನ ದ್ವಿತೀಯ ಪಿಯುಸಿ ವಾರ್ಷಿಕ ಪರೀಕ್ಷೆಯ ಅಂತಿಮ ವೇಳಾಪಟ್ಟಿಯಲ್ಲಿ ಉರ್ದು ಮತ್ತು ಅರೇಬಿಕ್ ಭಾಷೆಯ ವಿಷಯಗಳ ಪರೀಕ್ಷೆ ಎ.21ರಂದು ನಡೆಸಲಾಗುವುದೆಂದು ತಿಳಿಸಲಾಗಿತ್ತು. ಈಗ ಪರಿಷ್ಕೃತ ವೇಳಾಪಟ್ಟಿಯನ್ನು ಪ್ರಕಟಿಸಿದ್ದು, ಅರೇಬಿಕ್ ಪರೀಕ್ಷೆಯನ್ನು ಮುಂದೂಡಲಾಗಿದೆ ಎಂದು ಪದವಿ ಪೂರ್ವ ಶಿಕ್ಷಣ ಇಲಾಖೆ ತಿಳಿಸಿದೆ. 

ಉರ್ದು ಮತ್ತು ಅರೇಬಿಕ್ ವಿಷಯಗಳನ್ನು ಅಭ್ಯಾಸ ಮಾಡುತ್ತಿರುವ ವಿದ್ಯಾರ್ಥಿಗಳಿಗೆ ಒಂದೇ ವೇಳೆಯಲ್ಲಿ ಒಂದೇ ದಿನ ಎರಡು ವಿಷಯಗಳನ್ನು ಬರೆಯಲು ಸಾಧ್ಯವಾಗುವುದಿಲ್ಲ. ಹಾಗಾಗಿ ವಿದ್ಯಾರ್ಥಿಗಳ ಹಿತದೃಷ್ಟಿಯಿಂದ ಉರ್ದು ವಿಷಯದ ಪರೀಕ್ಷೆಯನ್ನು ಏ.21 ರಂದು, ಅರೇಬಿಕ್ ವಿಷಯದ ಪರೀಕ್ಷೆಯನ್ನು ಏ.29ರಂದು ನಡೆಸಲಾಗುವುದು ಎಂದು ಪರಿಷ್ಕೃತ ವೇಳಾಪಟ್ಟಿಯಲ್ಲಿ ತಿಳಿಸಲಾಗಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News