ಬೆಂಗಳೂರಿನಲ್ಲಿ ಫೆ.16ರ ವರೆಗೆ ವಿದ್ಯುತ್ ಪೂರೈಕೆಯಲ್ಲಿ ವ್ಯತ್ಯಯ
ಬೆಂಗಳೂರು, ಫೆ. 13: ನಗರದ ಕೆಲ ಪ್ರದೇಶಗಳಲ್ಲಿ ವಿದ್ಯುತ್ ದುರಸ್ಥಿ ಕಾಮಗಾರಿಗಳನ್ನು ಕೈಗೊಂಡಿರುವ ಕಾರಣ ಆ ಪ್ರದೇಶಗಳಲ್ಲಿ ಫೆ.14ರಿಂದ ಫೆ.16ರ ವರೆಗೆ ಬೆಳಗ್ಗೆ 10ರಿಂದ ಸಂಜೆ 5ರ ವರೆಗೆ ವಿದ್ಯುತ್ ಪೂರೈಕೆಯಲ್ಲಿ ವ್ಯತ್ಯಯವಾಗಲಿದೆ ಎಂದು ಬೆಂಗಳೂರು ವಿದ್ಯುಚ್ಛಕ್ತಿ ಸರಬರಾಜು ಕಂಪೆನಿ ಲಿಮಿಟೆಡ್ (ಬೆಸ್ಕಾಂ) ತಿಳಿಸಿದೆ.
ಫೆ.14 ರಂದು ನಗರದ ದಕ್ಷಿಣ ವಲಯದಲ್ಲಿ ವಿನಾಯಕ ನಗರ, ವಿಲ್ಸನ್ ಗಾರ್ಡನ್, ಜರಗನಹಳ್ಳಿ, ವೈ.ವಿ. ಅಣ್ಣಯ್ಯ ರಸ್ತೆ, ಬಿಕಿಸಿಪುರ, ಪ್ರತಿಮಾ ಇಂಡಸ್ಟ್ರಿಯಲ್ ಲೇಔಟ್, ಇಸ್ರೋ ಲೇಔಟ್, ಕುಮಾರಸ್ವಾಮಿ ಲೇಔಟ್, ವಸಂತ ವಲ್ಲಬ ನಗರ, ಕುವೆಂಪು ನಗರ ಮುಖ್ಯರಸ್ತೆ, ವಸಂತಪುರ, ಜೆಪಿ ನಗರ ಶಾಕಾಂಬರಿ ನಗರ, ಬ್ಯಾಂಕ್ ಆಫ್ ಬರೋಡಾ ಕಾಲನಿ, ಚುಂಚಗಟ್ಟಾ ಗ್ರಾಮ, ಸುಪ್ರಜಾ ನಗರ, ಗಣಪತಿ ಪುರ, ಓಲ್ಡ್ ಬ್ಯಾಂಕ್ ಕಾಲನಿ, ಟೀಚರ್ಸ್ ಕಾಲನಿ, ಬೀರೇಶ್ವರ ನಗರ, ಗಣಪತಿಪುರ, ಕೋಣನಕುಂಟೆ ಕೈಗಾರಿಕಾ ಪ್ರದೇಶ, ಈಶ್ವರ ಲೇಔಟ್, ಶಿವಶಕ್ತಿ ನಗರ, ಕಿಮ್ಸ್ ಕಾಲೇಜು ರಸ್ತೆ, ರಾಮಾಂಜನೇಯ ನಗರ, ಗುರಪನಪಾಳ್ಯ, ಚಿನ್ನಪ್ಪನಹಳ್ಳಿ, ಮಾರತಹಳ್ಳಿ, ವಸಂತ ವಲ್ಲಭ ನಗರ, ನೃಪತುಂಗ ನಗರ ಸೇರಿದಂತೆ ಸುತ್ತಮುತ್ತಲಿನ ಪ್ರದೇಶಗಳಲ್ಲಿ ವಿದ್ಯುತ್ ವ್ಯತ್ಯವಾಗಲಿದೆ ಎಂದು ಪ್ರಕಟಣೆ ತಿಳಿಸಿದೆ.