ʼಹಾರುವ ಬಸ್‌ಗಳು ಶೀಘ್ರದಲ್ಲೇ ಬರಲಿವೆ, ಬಿಜೆಪಿಯನ್ನೇ ಅಧಿಕಾರಕ್ಕೆ ತನ್ನಿʼ: ಮತದಾರರಿಗೆ ಗಡ್ಕರಿ ಆಶ್ವಾಸನೆ !

Update: 2022-02-17 07:27 GMT

ಪ್ರಯಾಗ್‌ರಾಜ್: ಜನರ ಅನುಕೂಲಕ್ಕಾಗಿ ಪ್ರಯಾಗ್‌ರಾಜ್‌ನಲ್ಲಿ ಶೀಘ್ರದಲ್ಲೇ ಹಾರುವ ಬಸ್‌ಗಳು ಪ್ರಾರಂಭವಾಗಲಿವೆ ಎಂದು ಬಿಜೆಪಿಯ ಹಿರಿಯ ನಾಯಕ ಮತ್ತು ಕೇಂದ್ರ ರಸ್ತೆ ಸಾರಿಗೆ ಮತ್ತು ಹೆದ್ದಾರಿಗಳು, ಹಡಗು ಮತ್ತು ಜಲಸಂಪನ್ಮೂಲ ಸಚಿವ ನಿತಿನ್ ಗಡ್ಕರಿ ಮಂಗಳವಾರ ಹೇಳಿದ್ದಾರೆ. ಈ ನಿಟ್ಟಿನಲ್ಲಿ ವಿಸ್ತೃತ ಯೋಜನಾ ವರದಿಯನ್ನು ಸಿದ್ಧಪಡಿಸಲಾಗುತ್ತಿದೆ ಮತ್ತು ಈ ಬಗ್ಗೆ ಉತ್ತರಪ್ರದೇಶ ಉಪ ಮುಖ್ಯಮಂತ್ರಿ ಕೇಶವ್ ಪ್ರಸಾದ್ ಮೌರ್ಯ ಅವರಿಗೂ ತಿಳಿಸಿದ್ದೇನೆ ಎಂದು ಹೇಳಿದರು.

ಅಲಹಾಬಾದ್ ಪಶ್ಚಿಮ ಕ್ಷೇತ್ರದ ಝಲ್ವಾ ಕ್ರಾಸಿಂಗ್ ಬಳಿ ಸಾರ್ವಜನಿಕ ಸಭೆಯನ್ನು ಉದ್ದೇಶಿಸಿ ಮಾತನಾಡಿದ ಅವರು, ಪ್ರಯಾಗ್‌ರಾಜ್‌ಗೆ ಸಮುದ್ರ ವಿಮಾನ ಸೇವೆಯನ್ನು ಪ್ರಾರಂಭಿಸುವ ಕನಸು ನನಗೂ ಇದೆ ಎಂದು ಹೇಳಿದರು. ಈ ಯೋಜನೆಯ ಮುಖಾಂತರ ನನಗೂ ದಿಲ್ಲಿಯಿಂದ ಪ್ರಯಾಗರಾಜ್‌ ಗೆ ವಿಮಾನದ ಮೂಲಕ ಆಗಮಿಸಿ ಸಂಗಂ ನೀರಿನಲ್ಲಿ ಇಳಿಯಬಹುದಾಗಿದೆ. ಇದು ಶೀಘ್ರದಲ್ಲೇ ಸತ್ಯವಾಗಲಿದೆ ಎಂದು ಅವರು ಜನರಿಗೆ ಆಶ್ವಾಸನೆ ನೀಡಿದರು. 

ಈಗ ಚಾಲನೆಯಲ್ಲಿರುವ ವಾಹನಗಳಲ್ಲೂ ಹೈಡ್ರೋಜನ್ ಇಂಧನವನ್ನು ಬಳಸಲಾಗುವುದು ಎಂದು ಕೇಂದ್ರ ಸಚಿವರು ಹೇಳಿದ್ದಾರೆ. ರಾಜ್ಯದಲ್ಲಿ ಕಬ್ಬು ಸಮೃದ್ಧವಾಗಿದೆ. ಇದರ ಸಹಾಯದಿಂದ ಎಥೆನಾಲ್ ಅನ್ನು ವಾಹನಗಳಿಗೆ ಇಂಧನವಾಗಿ ಬಳಸಲಾಗುವುದು. ಎಥೆನಾಲ್ ಬಳಕೆಯಿಂದಾಗಿ ಒಂದು ಲೀಟರ್ ಪೆಟ್ರೋಲ್‌ಗೆ ೧೦೦ ರೂ.ಯಿಂದ ೬೮ರೂ.ಯಾಗಲಿದೆ ಎಂದು ಗಡ್ಕರಿ ಹೇಳಿಕೆ ನೀಡಿದ್ದಾಗಿ hindstantimes ವರದಿ ಮಾಡಿದೆ. 

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News