ತಮ್ಮ ವಿರುದ್ಧ ವಾಗ್ದಾಳಿ ನಡೆಸುತ್ತಿರುವ ತೆಲಂಗಾಣ ಸಿಎಂ ಚಂದ್ರಶೇಖರ್ ರಾವ್ ಗೆ ಕರೆ ಮಾಡಿ ಶುಭಾಶಯ ತಿಳಿಸಿದ ಪ್ರಧಾನಿ

Update: 2022-02-17 07:35 GMT

ಹೈದರಾಬಾದ್: ತೆಲಂಗಾಣ ಮುಖ್ಯಮಂತ್ರಿ ಕೆ.ಚಂದ್ರಶೇಖರ್ ರಾವ್ ಅವರಿಗೆ ಪ್ರಧಾನಿ ನರೇಂದ್ರ ಮೋದಿ ಇಂದು ಬೆಳಗ್ಗೆ ಕರೆ ಮಾಡಿ ಹುಟ್ಟುಹಬ್ಬದ ಶುಭಾಶಯ ಕೋರಿದ್ದಾರೆ.

ರಾವ್ ಅಥವಾ ಕೆಸಿಆರ್ ಅವರು ಪ್ರಧಾನಿಗೆ ಧನ್ಯವಾದ ಅರ್ಪಿಸಿದರು. "ಬೇರೆ ಯಾವುದನ್ನೂ ಚರ್ಚಿಸಲಾಗಿಲ್ಲ" ಎಂದು ಮುಖ್ಯಮಂತ್ರಿ ಕಚೇರಿಯ ಮೂಲಗಳು NDTV ಗೆ ತಿಳಿಸಿವೆ.

ಫೆಬ್ರವರಿ 5 ರಂದು ಹೈದರಾಬಾದ್‌ಗೆ ಸಂತ ರಾಮಾನುಜಾಚಾರ್ಯರ ಪ್ರತಿಮೆಯನ್ನು ಉದ್ಘಾಟಿಸಲು ಪ್ರಧಾನಿ ಬಂದಾಗ ಕೆಸಿಆರ್ ಅವರು ಪ್ರಧಾನಿ ಮೋದಿಯವರನ್ನು ಭೇಟಿಯಾಗುವುದನ್ನು ಅಥವಾ ಸ್ವಾಗತಿಸುವುದನ್ನು ತಪ್ಪಿಸಿದ ನಂತರ ಇದು ಅವರ ಮೊದಲ ಸಂವಾದವಾಗಿದೆ. ಮುಖ್ಯಮಂತ್ರಿ ಕೆಸಿಆರ್ ಆರೋಗ್ಯದ ಕಾರಣಗಳನ್ನು ಉಲ್ಲೇಖಿಸಿ ಮೋದಿ ಭೇಟಿ ನಿರಾಕರಿಸಿದ್ದರು.

ಇತ್ತೀಚಿನ ವಾರಗಳಲ್ಲಿ ಕೆಸಿಆರ್ ಅವರು ಪ್ರಧಾನಿ ಮತ್ತು ಬಿಜೆಪಿ ಸರಕಾರವನ್ನು ಹಲವು ಬಾರಿ ಟೀಕಿಸಿದ್ದಾರೆ. "ಬಿಜೆಪಿಯನ್ನು ಬಂಗಾಳ ಕೊಲ್ಲಿಗೆ ಎಸೆಯಿರಿ" ಎಂದು ಜನರಿಗೆ ಕರೆ ನೀಡಿದ್ದರು.

ಪ್ರಧಾನಿ ಮೋದಿಯವರ ಮೇಲಿನ ಕೆಸಿಆರ್ ವಾಗ್ದಾಳಿಯು  ವೈಯಕ್ತಿಕವಾಗಿಯೂ ಸಹ ಹೆಚ್ಚು ಕಠೋರವಾಗಿವೆ.

ಪ್ರಧಾನಿ  ಅವರು "ಚುನಾವಣೆಗಾಗಿ ಉಡುಗೆ ತೊಟ್ಟಿದ್ದಾರೆ" ಎಂದು ಕೆಸಿಆರ್ ಇತ್ತೀಚೆಗೆ ಟೀಕಿಸಿದ್ದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News