×
Ad

ಫೆ. 20: ಉಪ್ಪಿನಂಗಡಿ ಮಾಲಿಕ್ ದೀನಾರ್ ಮಹಿಳಾ ಶರೀಅತ್ ಕಾಲೇಜು ಸನದು ದಾನ ಸಮ್ಮೇಳನ

Update: 2022-02-18 22:48 IST

ಉಪ್ಪಿನಂಗಡಿ: ಇಲ್ಲಿನ ಮಾಲಿಕ್ ದೀನಾರ್ ಜುಮಾ ಮಸೀದಿ ಅಧೀನದಲ್ಲಿರುವ ಸಮಸ್ತ ಅಂಗೀಕೃತ ಮಹಿಳಾ ಶರೀಅತ್ ಕಾಲೇಜಿನ ಅಲ್ ಫಾಳಿಲಾ ಮಾಲಿಕಿಯ್ಯಾ ಸನದು ದಾನ ಸಮಾರಂಭ ವಿವಿಧ ಸಾಂಸ್ಕೃತಿಕ ಕಾರ್ಯಕ್ರಮದೊಂದಿಗೆ ಫೆ.20ರಂದು ಕಾಲೇಜಿನ ಕ್ಯಾಂಪಸ್‍ನಲ್ಲಿ ಜರಗಲಿದೆ ಎಂದು ಕಾಲೇಜಿನ ಪ್ರಾಂಶುಪಾಲರಾದ ನಝೀರ್ ಅಝ್‍ಹರಿ ಬೊಲ್ಮಿನಾರ್ ತಿಳಿಸಿದರು.

ಫೆ. 18ರಂದು ಕಾಲೇಜು ಕಚೇರಿಯಲ್ಲಿ ಕರೆಯಲಾದ ಪತ್ರಿಕಾಗೋಷ್ಠಿಯಲ್ಲಿ ಕಾಲೇಜಿನ ಬಗೆಗಿನ ಮಾಹಿತಿ ನೀಡುತ್ತಾ ಅವರು ತಿಳಿಸಿದರು. ಮಾಲಿಕ್ ದೀನಾರ್ ಜುಮಾ ಮಸೀದಿ ಉಪ್ಪಿನಂಗಡಿ ಇದರ ಅಧೀನದಲ್ಲಿರುವ ಮಹಿಳಾ ಶರೀಅತ್ ಮತ್ತು ಆರ್ಟ್ಸ್ ಕಾಲೇಜು ಹಲವು ವರ್ಷಗಳಿಂದ ಧಾರ್ಮಿಕ ಮತ್ತು ಲೌಕಿಕ ಸಮನ್ವಯ ವಿದ್ಯಾಭ್ಯಾಸದೊಂದಿಗೆ ಕಾರ್ಯಾಚರಿಸುವ ಸಂಸ್ಥೆಯಾಗಿದ್ದು, ಇಲ್ಲಿ ಎಸ್.ಎಸ್.ಎಲ್.ಸಿ. ತೇರ್ಗಡೆ ಹೊಂದಿದ ವಿದ್ಯಾರ್ಥಿನಿಗಳಿಗೆ ಸಮಸ್ತ ಅಂಗೀಕೃತ ಅಲ್ ಫಾಳಿಲಾ ಮಾಲಿಕಿಯ್ಯಾ ಮತ್ತು ಪಿಯುಸಿ ಆರ್ಟ್ಸ್ ವಿದ್ಯಾಭ್ಯಾಸವನ್ನು ನೀಡಲಾಗುತ್ತಿದೆ ಎಂದರು.

ರವಿವಾರ ಬೆಳಗ್ಗೆ ಜಮಾಅತ್ ಕಾರ್ಯದರ್ಶಿ ಯೂಸುಫ್ ಹಾಜಿ ಹೆಚ್. ಇವರ ಧ್ವಜಾರೋಹಣದಿಂದ ಆರಂಭವಾಗುವ ಕಾರ್ಯಕ್ರಮವು ಮಹಿಳಾ ಸಂಗಮ, ಪಾಲಕರು ಮತ್ತು ವಿದ್ಯಾರ್ಥಿಗಳ ಸಮ್ಮಿಲನ ಮತ್ತು ಸಮಾರೋಪ ಸಮ್ಮೇಳನ ಮೂರು ವಿಭಾಗಗಳಾಗಿ ನಡೆಯಲಿದೆ ಎಂದು ಅವರು ತಿಳಿಸಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News