ಅತಿಕ್ರಮಣಗೊಂಡ ವಕ್ಫ್ ಆಸ್ತಿಗಳ ಸ್ವಾಧೀನಕ್ಕೆ ಕಾನೂನು ಕ್ರಮ: ಶಾಫಿ ಸಅದಿ

Update: 2022-02-19 11:38 GMT

ಮಂಗಳೂರು, ಫೆ.19: ಅತಿಕ್ರಮಣಗೊಂಡ ವಕ್ಫ್ ಆಸ್ತಿಗಳ ಸ್ವಾಧೀನಕ್ಕೆ ಕಾನೂನು ಹೋರಾಟ ನಡೆಸಲಾಗುವುದು ಎಂದು  ಕರ್ನಾಟಕ ರಾಜ್ಯ ವಕ್ಫ್ ಬೋರ್ಡ್ ಅಧ್ಯಕ್ಷ ಮುಹಮ್ಮದ್ ಶಾಫಿ ಸಅದಿ ತಿಳಿಸಿದ್ದಾರೆ.

ನಗರದಲ್ಲಿಂದು ಕರೆದ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ದೇಶದಲ್ಲಿ ವಕ್ಫ್ ಸಂಸ್ಥೆ ಅತ್ಯಂತ ಹೆಚ್ಚಿನ ಪ್ರಮಾಣದಲ್ಲಿ ಆಸ್ತಿ ಹೊಂದಿರುವ ಸಂಸ್ಥೆಗಳಲ್ಲಿ ಮೂರನೇ ಸ್ಥಾನ ಪಡೆದಿದೆ. ರಾಜ್ಯದಲ್ಲಿ ಒಂದು ಲಕ್ಷ ಎಪ್ಪತ್ತು ಸಾವಿರ ಎಕರೆ ಭೂಮಿ ವಕ್ಫ್ ಆಸ್ತಿ ಯಾಗಿದ್ದರೂ ಈ ಪೈಕಿ 75 ಸಾವಿರ ಎಕರೆ ಭೂಮಿ ಅತಿಕ್ರಮಣವಾಗಿದೆ. ಅತಿಕ್ರಮಣಗೊಂಡ ವಕ್ಫ್ ಆಸ್ತಿ ಮರಳಿ ಪಡೆಯಲು ಕಾನೂನು ಪ್ರಕಾರ ಕ್ರಮ ಕೈಗೊಳ್ಳಲಾಗುತ್ತಿದೆ. ಜೊತೆಗೆ ಈಗ ಇರುವ ವಕ್ಫ್ ಆಸ್ತಿ ಅತಿಕ್ರಮಣವಾಗದಂತೆ ಉಳಿಸಿಕೊಳ್ಳಲು ಕ್ರಮ ಕೈಗೊಳ್ಳುತ್ತಿದೆ ಎಂದರು

ಸರಕಾರದ ಸಹಾಯದೊಂದಿಗೆ ವಕ್ಫ್ ಆಸ್ತಿಯ ಡ್ರೋನ್ ಸರ್ವೇ ನಡೆಯುತ್ತಿದೆ. ಗುರುತಿಸಲಾದ ವಕ್ಫ್ ಆಸ್ತಿಗಳನ್ನು ಪರಭಾರೆ ಮಾಡದಂತೆ ಕ್ರಮ ಕೈಗೊಳ್ಳಲಾಗುತ್ತಿದೆ ಎಂದು ಶಾಫಿ ಸಅದಿ ತಿಳಿಸಿದ್ದಾರೆ.

*ಪ್ರಧಾನ ಮಂತ್ರಿ ಜನ ವಿಕಾಸ್ ಯೋಜನೆಯಡಿ 75 ಕೋಟಿ ರೂ. ಅನುದಾನ ರಾಜ್ಯ ವಕ್ಫ್ ಮಂಡಳಿಗೆ ದೊರೆತಿದೆ. ಈ ಪೈಕಿ ದಕ್ಷಿಣ ಕನ್ನಡ ಜಿಲ್ಲೆಯ ವಕ್ಫ್ ಸಂಸ್ಥೆಯ ವ್ಯಾಪ್ತಿಯ ಮೂರು ಸಂಸ್ಥೆ ಗಳಿಗೆ ಈಗಾಗಲೇ 25 ಕೋಟಿ ರೂ. ಬಿಡುಗಡೆ ಯಾಗಿದೆ ಎಂದು ಶಾಫಿ ಸಅದಿ ತಿಳಿಸಿದ್ದಾರೆ.

*ರಾಜ್ಯ ಬಜೆಟ್ ನಲ್ಲಿ 377 ಕೋಟಿ ರೂ.ಗಳನ್ನು ವಕ್ಫ್ ಮಂಡಳಿಗೆ ನಿಗದಿಪಡಿಸಲು ಅಂತಿಮ ಪಟ್ಟಿ ಕಳುಹಿಸಲಾಗಿದೆ. ವಕ್ಫ್ ಮಂಡಳಿಯ ವ್ಯಾಪ್ತಿಯಲ್ಲಿ ಬರುವ ಆಸ್ತಿಗಳನ್ನು ಅಭಿವೃದ್ಧಿಪಡಿಸಿ ಖಾಲಿ ಇರುವ ಪ್ರದೇಶದಲ್ಲಿ ಶಿಕ್ಷಣ ಸಂಸ್ಥೆ, ಆಸ್ಪತ್ರೆ ಹಾಗೂ ಮಂಡಳಿಗೆ ಆದಾಯ ಬರುವ ಅಭಿವೃದ್ಧಿ ಯೋಜನೆಗಳನ್ನು ಹಮ್ಮಿಕೊಳ್ಳುವ ಗುರಿ ಹೊಂದಲಾಗಿದೆ ಎಂದು ಶಾಫಿ ಸಅದಿ ತಿಳಿಸಿದ್ದಾರೆ.

*ಹಿಜಾಬ್ ವಿಷಯದ ಗೊಂದಲಕ್ಕೆ ಸೌಹಾರ್ದಯುತವಾಗಿ ಪರಿಹಾರ ಕಂಡುಕೊಳ್ಳಲು ಪ್ರಯತ್ನ ನಡೆಯುತ್ತಿದೆ. ಇದರಿಂದ ಶಿಕ್ಷಣ ಸಂಸ್ಥೆಗಳಿಗೂ ಕೋಮುವಾದದ ಬಣ್ಣ ವ್ಯಾಪಿಸಿರುವುದು ದುರದೃಷ್ಟಕರ. ಹಿಜಾಬ್ ಹೆಸರಿನಲ್ಲಿ ಸಾಮರಸ್ಯ ಕದಡು ಕಾರ್ಯ ನಡೆಯುತ್ತಿದೆ. ಕೆಲವು ಕಿಡಿಗೇಡಿಗಳು ಈ ಸಂದರ್ಭದಲ್ಲಿ ಅವಕಾಶಗಳನ್ನು ಬಳಸಿಕೊ ಳ್ಳುತ್ತಿರುವುದು ವಿಷಾದನೀಯ. ಈ ಸಮಸ್ಯೆಯನ್ನು ಬಗೆಹರಿಸಲು ಸಂವಿಧಾನ  ಹಕ್ಕುಗಳ ರಕ್ಷಣೆಗಾಗಿ ವಕ್ಫ್ ಮಂಡಳಿ ಪ್ರಯತ್ನಿಸು ತ್ತಿದೆ. ಇತರ ಧರ್ಮದ ಧಾರ್ಮಿಕ ಮುಖಂಡರ ಬಳಿ ಸಮಾಲೋಚನೆ ನಡೆಸುತ್ತಿದೆ. ಅವರಿಂದ ಉತ್ತಮ ಪ್ರತಿಕ್ರಿಯೆ ದೊರೆಯುತ್ತಿದ್ದು, ಸರಕಾರದ ಹಂತದಲ್ಲೂ ಪ್ರಯತ್ನ ನಡೆಯುತ್ತಿದೆ ಎಂದು ಶಾಫಿ ಸಅದಿ ತಿಳಿಸಿದ್ದಾರೆ.

Full View

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News