×
Ad

ಶಿಕ್ಷಣ ಕ್ಷೇತ್ರ, ವಿದ್ಯಾರ್ಥಿಗಳನ್ನು ಕೋಮು ದೃಷ್ಟಿಯಿಂದ ನೋಡುವುದು ಅಮಾನವೀಯ : ಜಯಪ್ರಕಾಶ್ ಡಿಸೋಜ

Update: 2022-02-19 20:58 IST

ಉಳ್ಳಾಲ: ಶಿಕ್ಷಣ ಎನ್ನುವುದು ದೇಶವನ್ನು ಕಟ್ಟುವ ಸಾಧನ. ಉತ್ತಮ ಶಿಕ್ಷಕರಿರುವ ಸಮಾಜ ಧನ್ಯ. ನಮ್ಮ ಬದುಕಿಗೆ ದಾರಿ ತೋರುವುದು ಶಿಕ್ಷಕರು. ಮನುಷ್ಯನನ್ನು ಮನುಷ್ಯನನ್ನಾಗಿ ಮಾಡುವುದು ಶಿಕ್ಷಣ ಎನ್ನುವುದನ್ನು ನಾವು ಅರ್ಥ ಮಾಡಿಕೊಳ್ಳಬೇಕು. ಶಿಕ್ಷಣ ಕ್ಷೇತ್ರವನ್ನು ಮತ್ತು ವಿದ್ಯಾರ್ಥಿಗಳನ್ನು  ಕೋಮು ದೃಷ್ಟಿಯಿಂದ ನೋಡುವುದು ಅಮಾನವೀಯ ಕ್ರಮ ಎಂದು ರಾಣಿಪುರ ಚರ್ಚ್ ನ ಧರ್ಮ ಗುರು ಜಯಪ್ರಕಾಶ್ ಡಿಸೋಜ ಅಭಿಪ್ರಾಯಪಟ್ಟರು.

ಅವರು ಉಳ್ಳಾಲ ಉರೂಸ್ ಪ್ರಯುಕ್ತ ಶನಿವಾರ ನಡೆದ ಶಿಕ್ಷಕರ ಸ್ನೇಹ ಮಿಲನ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದರು.

ಶಿಕ್ಷಣದಲ್ಲಿ ಕೋಮುವಾದಿಕರಣ ಮಾಡಲಾಗುತ್ತದೆ. ವಿದ್ಯಾರ್ಥಿಗಳನ್ನು ವಿದ್ಯಾರ್ಥಿ ಎಂದು ಗುರುತಿಸುವ ಬದಲು ಜಾತಿ ಆಧಾರದಲ್ಲಿ ಗುರುತಿಸಲಾಗುತ್ತದೆ. ನಾವು ಎತ್ತ ಸಾಗುತ್ತೇವೆ ಎಂದು ಕಳವಳ ಹುಟ್ಟುತ್ತವೆ ಈ ಬಗ್ಗೆ  ಯೋಚಿಸಬೇಕಾದ ಪರಿಸ್ಥಿತಿ ನಮ್ಮ ಮುಂದೆ ಇದೆ, ಆ ನಿಟ್ಟಿನಲ್ಲಿ ನಾವು ಕಾರ್ಯ ಪ್ರವೃತ್ತರಾಗೋಣ ಎಂದೂ  ಅವರು ಮನವಿ ಮಾಡಿದರು‌.

ಶಿಕ್ಷಣಾಧಿಕಾರಿ ಡಾ. ಪ್ರಶಾಂತ್ ಕುಮಾರ್  ಮಾತನಾಡಿ, ಏನು ಬದಲಾವಣೆ ಆದರೂ ನಾವು ಮುಕ್ತ ಮನಸ್ಸಿನಿಂದ ಕೆಲಸ ಮಾಡಬೇಕು. ಧರ್ಮ ಜಾತಿ ಹಲವು ಇದ್ದರೂ ಎಲ್ಲವನ್ನೂ ಮೀರಿ ಏಕತೆಯ ಬದುಕು ನಮ್ಮದಾಗಬೇಕು. ಅಧ್ಯಾಪಕರನ್ನು  ಸೇರಿಸಿ ಇಂತಹ ಕಾರ್ಯಕ್ರಮಗಳನ್ನು ಹಮ್ಮಿಕೊಂಡಿರುವುದು ಶ್ಲಾಘನೀಯ ಎಂದರು .

ಉಳ್ಳಾಲ ದರ್ಗಾ ಅಧ್ಯಕ್ಷ ಅಬ್ದುಲ್ ರಶೀದ್ ಕಾರ್ಯಕ್ರಮ ದ ಅಧ್ಯಕ್ಷತೆ ವಹಿಸಿದ್ದರು. ಜಮೀಯತುಲ್ ಪಲಾಹ್ ಉಡುಪಿ ಅಧ್ಯಕ್ಷ ಶಾಫಿ ಅಹ್ಮದ್, ಅಲೆಮಾರಿ ಮತ್ತು ಅರೆ ಅಲೆಮಾರಿ ಅಧ್ಯಕ್ಷ ರವೀಂದ್ರ ಶೆಟ್ಟಿ ಉಳಿದೊಟ್ಟು ಮಾತಾಡಿದರು.

ಮುಸ್ತಫಾ ಅಬ್ದುಲ್ಲಾ ಸ್ವಾಗತಿಸಿ ಪ್ರಾಸ್ತಾವಿಕವಾಗಿ ಮಾತನಾಡಿದರು. ಅಬ್ದುಲ್ ಸಲಾಂ ಮದನಿ ಅಲ್ ಹಾದಿ ತಂಙಳ್ ದುಆ ನೆರವೇರಿಸಿದರು. ಮೋಹನ್ ಕುಮಾರ್ ಸಂಪನ್ಮೂಲ ವ್ಯಕ್ತಿ ಯಾಗಿ ಭಾಗವಹಿಸಿದ್ದರು.

ಕಾರ್ಯಕ್ರಮದಲ್ಲಿ  ಡಾ. ಯು.ಟಿ.ಇಫ್ತಿಕರ್, ಉಳ್ಳಾಲ ದರ್ಗಾ ಪ್ರಧಾನ ಕಾರ್ಯದರ್ಶಿ ತ್ವಾಹಾ ಹಾಜಿ, ಉಪಾಧ್ಯಕ್ಷ ಯು ಕೆ ಮೋನು, ಹಾಜಿ ಬಾವಾ ಮೊಹಮ್ಮದ್ , ನಗರ ಸಭೆಯ ಅಧ್ಯಕ್ಷೆ ಚಿತ್ರ ಕಲ,  ಉಳ್ಳಾಲ ದರ್ಗಾ ಮಾಧ್ಯಮ ಉಸ್ತುವಾರಿ ಫಾರೂಕ್ ಉಳ್ಳಾಲ್, ಲೆಕ್ಕ ಪರಿಶೋಧಕ ಯುಟಿ ಇಲ್ಯಾಸ್, ಚಾರಿಟೇಬಲ್ ಟ್ರಸ್ಟ್ ಉಪಾಧ್ಯಕ್ಷ ಯು.ಕೆ.ಇಬ್ರಾಹಿಂ ಕಕ್ಕೆತೋಟ, ಚಾರಿಟೇಬಲ್ ಕೋಶಾಧಿಕಾರಿ ಜೆ.ಅಬ್ದುಲ್ ಹಮೀದ್ , ಅರೆಬಿಕ್ ಟ್ರಸ್ಟ್ ಕಾರ್ಯದರ್ಶಿ ಆಸೀಫ್ ಅಬ್ದುಲ್ಲಾ, ದರ್ಗಾ ಆಡಳಿತ ಸಮಿತಿ ಸದಸ್ಯರು ಗಳಾದ ಕೆ.ಎನ್.ಮೊಹಮ್ಮದ್ ಅಳೇಕಲ, ಹನೀಫ್ ಚೆಂಬು ಗುಡ್ಡೆ, ಖಲೀಲ್ ಕಡಪರ, ಹಸನಬ್ಬ ಕಡಪರ, ಎಂ.ಎಚ್..ಇಬ್ರಾಹಿಂ ಹಳೇಕೋಟೆ, ಟ್ರಸ್ಟಿಗಳಾದ ಅಹ್ಮದ್ ಬಾವ ಕೋಡಿ, ಹನೀಫ್ ಕೋಡಿ, ಮುಖ್ಯೋಪಾದ್ಯಾರುಗಳಾದ ಎಂ.ಎಚ್ ಮಲಾರ್,ಇಂತಿಯಾಝ್, ರಸೂಲ್ ಖಾನ್, ಪ್ರಿನ್ಸಿಪಾಲ್ಅಬ್ದುಲ್ ರಹಿಮಾನ್,  ರಫೀಕ್ ಮಾಸ್ಟರ್, ನಗರ ಸಭೆ ಸದಸ್ಯರಾದ  ಸ್ವಪ್ನಾ ಹರೀಶ್, ಶಶಿಕಲಾ, ಭಾರತಿ, ವೀಣಾ, ನಮಿತಾ ಗಟ್ಟಿ ಮತ್ತಿತರರು ಉಪಸ್ಥಿತರಿದ್ದರು.

ಕೆಎಂಕೆ ಮಂಜನಾಡಿ  ಕಾರ್ಯಕ್ರಮ ನಿರೂಪಿಸಿದರು. ಎ.ಕೆ.ಮೊಯ್ದಿನ್ ವಂದಿಸಿದರು. ಮುಖ್ಯೋಪಾಧ್ಯಾಯಿನಿ ನಸೀಮಾ, ರಮ್ಲತ್, ಸಂಗೀತಾ, ಪವಿತ್ರ ಹಾಗೂ ಭಾರತಿ ಕಾರ್ಯಕ್ರಮ ನಿರ್ವಹಣೆಯಲ್ಲಿ ಸಹಕರಿಸಿದರು

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News