×
Ad

ಉಳ್ಳಾಲ ಉರೂಸ್; ಫೆ.20ರ ಕಾರ್ಯಕ್ರಮ

Update: 2022-02-19 22:55 IST

ಉಳ್ಳಾಲ: ಉರೂಸ್ ಪ್ರಯುಕ್ತ ರವಿವಾರ ಮಧ್ಯಾಹ್ನ.3.30ಕ್ಕೆ ಅಮೀರ್ ತಂಙಳ್ ದುಆ ಆಶೀರ್ವಚನ ನೀಡಲಿದ್ದಾರೆ. ಶೈಖುನಾ ಉಸ್ಮಾನ್ ಫೈಝಿ ತೋಡಾರ್ ಉಸ್ತಾದ್, ಕೆ.ಟಿ.ಅಬ್ದುಲ್ಲ ಫೈಝಿ ವೆಳಿಮುಕ್, ಕೆ.ಎಲ್. ಅಬ್ದುಲ್ ಖಾದರ್  ಅಲ್ ಖಾಸಿಮಿ, ಸೈಯ್ಯದ್ ತ್ವಾಹ ಜಿಫ್ರಿ ತಂಙಳ್ ಬೆಳ್ತಂಗಡಿ ಮುಂತಾದ ವಿದ್ವಾಂಸರು ಮತ್ತು ಸಾದಾತ್ ಗಳು ಭಾಗವಹಿಸಲಿದ್ದಾರೆ.

ಉಳ್ಳಾಲ ಉರೂಸ್ ಪ್ರಯುಕ್ತ ಮಗ್ರಿಬ್ ನಮಾಝ್ ಬಳಿಕ ಧಾರ್ಮಿಕ ಉಪನ್ಯಾಸ ನಡೆಯಲಿದೆ.

ಬಾತಿಷಾ ತಂಙಳ್ ದುಆ ಆಶೀರ್ವಚನ ನೀಡಲಿದ್ದಾರೆ. ಹಸನ್ ಪೂಕಟ್ಟೂರು ನೇತೃತ್ವ ವಹಿಸಲಿದ್ದು, ಹಾಜಿ ಅಬ್ದುಲ್ ರಶೀದ್ ಅಧ್ಯಕ್ಷತೆ ವಹಿಸಲಿದ್ದಾರೆ. ಜಲೀಲುರ್ರಹ್ಮಾನ್ ಮುಖ್ಯ ಪ್ರಭಾಷಣ ಮಾಡಲಿದ್ದಾರೆ. ಎಸ್.ಎಂ‌ತಂಗಳ್ ವಾಲೆ ಮುಃಡೋವು, ಅಝ್ಹಹರ್  ಫೈಝಿ ಬೊಳ್ಳೂರು, ಕೆ.ಸಿ.ಎಂ. ಶರೀಫ್ ಫೈಝಿ ಕಡಬ, ಮೂಸ ದಾರಿಮಿ ಕಕ್ಕಿಂಜೆ ಸಹಿತ ಇನ್ನೂ ಅನೇಕ ಸಾದಾತ್ ಗಳು ಮತ್ತು ಮತ ವಿದ್ವಾಂಸರು ಪಾಲ್ಗೊಳ್ಳಲಿದ್ದಾರೆ ಎಂದು  ಉಳ್ಳಾಲ ದರ್ಗಾ ಮಾಧ್ಯಮ ಉಸ್ತುವಾರಿ ಫಾರೂಕ್ ಉಳ್ಳಾಲ್ ಪ್ರಕಟಣೆಯಲ್ಲಿ  ತಿಳಿಸಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News