×
Ad

ಮಂಗಳೂರು: ಎಸ್ಕೆಎಸೆಸ್ಸೆಫ್ ಸ್ಥಾಪನಾ ದಿನಾಚರಣೆ

Update: 2022-02-20 23:12 IST

ಮಂಗಳೂರು, ಫೆ.20: ಎಸ್ಕೆಎಸೆಸ್ಸೆಫ್ ಸ್ಥಾಪನಾ ದಿನದ ಪ್ರಯುಕ್ತ ನಗರದ ಬಂದರ್ ಶಾಖೆಯ ವತಿಯಿಂದ ಸಮಸ್ತ ಕಚೇರಿಯ ವಠಾರದಲ್ಲಿ ಎಸ್ಕೆಎಸೆಸ್ಸೆಫ್ ದಿನವನ್ನು ಆಚರಿಸಲಾಯಿತು.

ಸಮಸ್ತ ಕೇರಳ ಜಂಇಯ್ಯತುಲ್ ಉಲಮಾ ಕಾಸರಗೋಡು ಜಿಲ್ಲಾ ಮುಶಾವರ ಸದಸ್ಯ, ಝೀನತ್ ಬಕ್ಷ್ ಕೇಂದ್ರ ಜುಮಾ ಮಸೀದಿಯ ಖತೀಬ್ ಅಲ್ಹಾಜ್ ಅಬುಲ್ ಅಕ್ರಂ ಮುಹಮ್ಮದ್ ಬಾಖವಿ ಮತ್ತು ಮಸೀದಿಯ ಉಪಾಧ್ಯಾಕ್ಷ, ಮಾಜಿ ಮೇಯರ್ ಕೆ.ಅಶ್ರಫ್ ಜಂಟಿಯಾಗಿ ಧ್ವಜಾರೋಹಣಗೈದರು.

ಮಸೀದಿಯ ಕಾರ್ಯಕಾರಿ ಸಮಿತಿ ಸದಸ್ಯ ಮುಹಮ್ಮದ್ ಅಶ್ರಫ್, ಮಂಗಳೂರು ರೇಂಜ್ ಮದ್ರಸ ಮ್ಯಾನೆಜ್ಮೆಂಟ್ ಅಧ್ಯಕ್ಷ ಹಾಜಿ ರಿಯಾಝುದ್ದೀನ್ ಬಂದರ್, ಎಂಎಲ್‌ಸಿ ಮಂಗಳೂರು ಅಧ್ಯಕ್ಷ ಝಾಕಿರ್ ಕೋಝಿ ಬಂದರ್,ಎಸ್ಕೆಎಸೆಸ್ಸೆಫ್ ಬಂದರ್ ಶಾಖೆಯ ಉಪಾಧ್ಯಕ್ಷ ಎಂ.ಕೆ. ಫಯಾಝ್, ಪ್ರಧಾನ ಕಾರ್ಯದರ್ಶಿ ನೌಶಾದ್ ಪ್ರಿಯ, ಕೋಶಾಧಿಕಾರಿ ಮುನವ್ವರ್, ಕಾರ್ಯದರ್ಶಿ ನಯೀಮ್ ಪಪ್ಪುಹಾಗೂ ಮಸೀದಿಯ ಮುಅಝ್ಝಿನ್‌ಗಳಾದ ಅಬ್ದುಲ್ ಹಮೀದ್ ಮುಸ್ಲಿಯಾರ್ ಚಾರ್ಮಾಡಿ, ಅಶ್ರಫ್ ದಾರಿಮಿ ಬೆಳ್ತಂಗಡಿ ಹಾಗೂ ಜಲಾಲ್ ಮಸ್ತಾನ್ ಹಿಫ್ಳುಲ್ ಖುರಾನ್ ಕಾಲೇಜಿನ ವಿದ್ಯಾರ್ಥಿಗಳು ಉಪಸ್ಥಿತರಿದ್ದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News