ಮಂಗಳೂರು: ಗಾಂಜಾ ಮಾರಾಟಕ್ಕೆ ಯತ್ನ; ಇಬ್ಬರು ಆರೋಪಿಗಳ ಸೆರೆ
Update: 2022-02-22 00:00 IST
ಮಂಗಳೂರು, ಫೆ.21: ತಲಪಾಡಿ ಗ್ರಾಮದ ನಾರ್ಲ ಪಡೀಲ್ ಸಮೀಪರ ರಾಮನಗರ ಎಂಬಲ್ಲಿಂದ ಕಾರಿನಲ್ಲಿ ಮಂಗಳೂರಿಗೆ ಅಕ್ರಮವಾಗಿ ಗಾಂಜಾ ಸಾಗಿಸಿಕೊಂಡು ಬಂದು ನಗರದಲ್ಲಿ ಮಾರಾಟ ಮಾಡಲು ಯತ್ನಿಸುತ್ತಿದ್ದ ಇಬ್ಬರು ಆರೋಪಿಗಳನ್ನು ನಗರ ಸಿಸಿಬಿ ಪೊಲೀಸರು ಬಂಧಿಸಿದ್ದಾರೆ.
ಆರೋಪಿಗಳನ್ನು ಕಾಸರಗೋಡು ಹೊಸಂಗಡಿ ಮಜಿಬೈಲ್ ನಿವಾಸಿ ಪ್ರಫುಲ್ ರಾಜ್ (23) ಮತ್ತು ಬಂಟ್ವಾಳ ಬೊಳಿಯಾರು ಅವಿನಾಶ್ (24) ಎಂದು ಗುರುತಿಸಲಾಗಿದೆ. ಆರೋಪಿಗಳಿಂದ 2.200 ಕೆಜಿ ಗಾಂಜಾ, 1200 ರೂ. ನಗದು, 2 ಮೊಬೈಲ್ ಫೋನ್, ಮಾರುತಿ ಸ್ವಿಪ್ಟ್ ಕಾರನ್ನು ವಶಪಡಿಸಿಕೊಳ್ಳಲಾಗಿದ್ದು, ಅವುಗಳ ಸೊತ್ತಿನ ಮೌಲ್ಯ 5,50,400 ರೂ. ಎಂದು ಅಂದಾಜಿಸಲಾಗಿದೆ.
ಆರೋಪಿಗಳ ಪೈಕಿ ಅವಿನಾಶ್ ಈ ಹಿಂದೆ ಕದ್ರಿಯಲ್ಲಿ ಸರಕಾರಿ ವಾಹನ ಹಾನಿಗೊಳಿಸಿದ ಪ್ರಕರಣದಲ್ಲಿ ಭಾಗಿಯಾಗಿದ್ದನು.ಕಾರ್ಯಾಚರಣೆಯಲ್ಲಿ ಸಿಸಿಬಿ ಇನ್‌ಸ್ಪೆಕ್ಟರ್ ಮಹೇಶ್ ಪ್ರಸಾದ್, ಎಸ್ಸೈ ರಾಜೇಂದ್ರ ಬಿ., ಪ್ರದೀಪ ಟಿಆರ್ ಮತ್ತಿತರರು ಪಾಲ್ಗೊಂಡಿದ್ದರು.