ಬೆಂಗಳೂರು: ತಾಯಿ-ಮಗಳ ಕೊಲೆ: ಆರೋಪಿಯ ಬಂಧನ
Update: 2022-02-22 15:40 IST
ಬೆಂಗಳೂರು, ಫೆ.22: ಮಾರಕಾಸ್ತ್ರದಿಂದ ಹೊಡೆದು ತಾಯಿ-ಮಗಳನ್ನು ಕೊಲೆ ಮಾಡಿರುವ ಘಟನೆ ಗೋವಿಂದರಾಜನಗರ ಠಾಣೆ ವ್ಯಾಪ್ತಿಯ ಮೂಡಲಪಾಳ್ಯದಲ್ಲಿ ಸೋಮವಾರ ರಾತ್ರಿ ನಡೆದಿರುವುದು ವರದಿಯಾಗಿದೆ.
.‘ಸಾವಿತ್ರಿ ಹಾಗೂ ಅವರ ತಾಯಿ ಸರೋಜಮ್ಮ ಕೊಲೆಯಾದವರು. ‘ಸಾವಿತ್ರಿಯ ಪತಿ ರವಿಕುಮಾರ್ ಕೊಲೆ ಆರೋಪಿಯಾಗಿದ್ದು, ಆತನನ್ನು ಪೊಲೀಸರು ಬಂಧಿಸಿದ್ದಾರೆ.
ಆರೋಪಿ ರವಿಕುಮಾರ್ ಹಾಗೂ ಸಾವಿತ್ರಿ ದಂಪತಿ ನಡುವೆ ಕೌಟುಂಬಿಕ ಕಲಹವಿದ್ದು, ಇದಕ್ಕೂ ಮೊದಲು ಹಲವು ಬಾರಿ ಇವರೊಳಗೆ ಜಗಳ ಆಗಿತ್ತು. ಅದೇರೀತಿ ಸೋಮವಾರ ರಾತ್ರಿಯೂ ಜಗಳವಾಗಿ ಪರಿಸ್ಥಿತಿ ವಿಕೋಪಕ್ಕೆ ಹೋಗಿತ್ತು. ಈ ವೇಳೆ ರವಿಕುಮಾರ್, ಪತ್ನಿ ಸಾವಿತ್ರಿಯ ಮೇಲೆ ಮಾರಕಾಸ್ತ್ರದಿಂದ ದಾಳಿ ನಡೆಸಿದ್ದಾನೆ. ಜಗಳ ಬಿಡಿಸಲು ಹೋಗಿದ್ದ ಅತ್ತೆ ಸರೋಜಮ್ಮರ ಮೇಲೂ ಮಾರಕಾಸ್ತ್ರದಿಂದ ಹಲ್ಲೆ ನಡೆಸಿದ್ದಾನೆ. ಇದರಿಂದ ಗಂಭೀರ ಗಾಯಗೊಂಡ ಇಬ್ಬರೂ ಸಾವನ್ನಪ್ಪಿದ್ದಾರೆ ಎಂದು ಪೊಲೀಸರು ತಿಳಿಸಿದ್ದಾರೆ.