ಹೃದಯಾಘಾತದಿಂದ ರೇಡಿಯೊ ಜಾಕಿ ರಚನಾ ನಿಧನ
Update: 2022-02-22 17:08 IST
ಬೆಂಗಳೂರು: ರೇಡಿಯೋ ಜಾಕಿ ಆಗಿದ್ದ ರಚನಾ (39) ಹೃದಯಾಘಾತದಿಂದ ಮಂಗಳವಾರ ನಿಧನರಾಗಿದ್ದಾರೆ.
ರೇಡಿಯೋ ಮಿರ್ಚಿಯಲ್ಲಿ ಕೆಲಸ ಮಾಡುತ್ತಿದ್ದ ಅವರು ಕೆಲವು ವರ್ಷಗಳ ಹಿಂದೆ ಕೆಲಸ ಬಿಟ್ಟಿದ್ದರು.
ಮುಂಜಾನೆ ಹೃದಯಘಾತವಾಗಿದ್ದ ಕಾರಣ ರಚನಾ ಅವರಿಗೆ ನಗರದ ಖಾಸಗಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಕೊಡಿಸಲಾಗಿತ್ತು. 12 ಗಂಟೆಗೆ ಚಿಕಿತ್ಸೆ ಫಲಕಾರಿಯಾಗದೇ ಸಾವನ್ನಪ್ಪಿದ್ದಾರೆ ಎಂದು ತಿಳಿದು ಬಂದಿದೆ.