ನಟ ಚೇತನ್ ಗೆ 14 ದಿನಗಳ ನ್ಯಾಯಾಂಗ ಬಂಧನ

Update: 2022-02-23 05:02 GMT

ಬೆಂಗಳೂರು, ಫೆ.23: ನ್ಯಾಯಾಧೀಶರ ಕುರಿತು ಸಾಮಾಜಿಕ ಜಾಲತಾಣದಲ್ಲಿ ಆಕ್ಷೇಪಾರ್ಹ ಟ್ವೀಟ್ ಮಾಡಿರುವ ಆರೋಪದಲ್ಲಿ ಬಂಧಿತ ನಟ, ಸಾಮಾಜಿಕ ಹೋರಾಟಗಾರ ಚೇತನ್ ಅವರನ್ನು 8ನೇ ಎಸಿಎಂಎಂ ನ್ಯಾಯಾಲಯವು 14 ದಿನಗಳ ನ್ಯಾಯಾಂಗ ಬಂಧನಕ್ಕೆ ಒಪ್ಪಿಸಿದೆ.

ಚೇತನ್ ಅವರನ್ನು ಶೇಷಾದ್ರಿಪುರಂ ಠಾಣಾ ಪೊಲೀಸರು ಮಂಗಳವಾರ ಬಂಧಿಸಿದ್ದರು. ತಡರಾತ್ರಿ  ಚೇತನ್ ಅವರನ್ನು ವೈಯಾಲಿಕಾವಲ್  ಪೋಲಿಸ್ ಠಾಣೆಯಿಂದ ಶೇಷಾದ್ರಿ ಪುರಂ ಪೊಲೀಸರು ಕೋರಮಂಗಲದ ನ್ಯಾಷನಲ್ ಗೇಮ್ಸ್ ವಿಲೇಜ್ ನಲ್ಲಿರುವ  ನ್ಯಾಯಾಧೀಶರ ಮುಂದೆ ಹಾಜರುಪಡಿಸಲಾಯಿತು.

ಹೈಕೋರ್ಟ್ ಹಿರಿಯ ವಕೀಲ ಎಸ್‌.ಬಾಲನ್ ವಾದ ಮಂಡಿಸಿದರು. ಆದರೆ ನ್ಯಾಯಾಧೀಶರು ಸಮ್ಮತಿ ಸೂಚಿಸಲಿಲ್ಲ. 8ನೇ ಎಸಿಎಂಎಂ ನ್ಯಾಯಾಲಯ ಅವರಿಗೆ 14 ದಿನ ನ್ಯಾಯಾಂಗ ಬಂಧನಕ್ಕೆ ಒಪ್ಪಿಸಿ ಆದೇಶಿಸಿದೆ. ಇಂದು (ಫೆ.23) ಜಾಮೀನು ಅರ್ಜಿ ವಿಚಾರಣೆಯಾಗಲಿದೆ ಎಂದು ಮೂಲಗಳು ತಿಳಿಸಿವೆ.

ಇದಾದ ಬಳಿಕ ಪೊಲೀಸರು ಕೇಂದ್ರ ಕಾರಾಗೃಹ ಪರಪ್ಪನ ಅಗ್ರಹಾರಕ್ಕೆ ಚೇತನ್ ಅವರನ್ನು ಕರೆತಂದರು. ನಂತರ ಅವರು ಜೈಲಿನಲ್ಲಿ ಇದ್ದು ಓದಲು ಡಾ.ಬಿ.ಆರ್.ಅಂಬೇಡ್ಕರ್ ಅವರು ಬರೆದಿರುವ 'Annihilation of caste' ಪುಸ್ತಕವನ್ನು ಪ್ರದರ್ಶಿಸಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News