ವಿಮೆನ್ ಇಂಡಿಯಾ ಮೂವ್ ಮೆಂಟ್ ಬಂಟ್ವಾಳ ತಾಲೂಕು ಸಮಿತಿ ಅಸ್ತಿತ್ವಕ್ಕೆ
Update: 2022-02-23 10:35 IST
ಬಂಟ್ವಾಳ, ಫೆ.23: ದೇಶಾದ್ಯಂತ ಮಹಿಳಾ ಹಕ್ಕುಗಳ ಸಂರಕ್ಷಣಾ ಹೋರಾಟ, ಮಹಿಳಾ ಸಬಲೀಕರಣ ಮತ್ತು ಮಹಿಳೆಯರ ಮೇಲಿನ ದೌರ್ಜನ್ಯದ ವಿರುದ್ಧ ಧ್ವನಿಯಾಗಿ ಕಾರ್ಯಾಚರಿಸುತ್ತಿರುವ ವಿಮೆನ್ ಇಂಡಿಯಾ ಮೂವ್ ಮೆಂಟ್ ಬಂಟ್ವಾಳ ತಾಲೂಕು ಸಮಿತಿ ಅಸ್ತಿತ್ವಕ್ಕೆ ಬಂದಿದೆ.
ಬಂಟ್ವಾಳದಲ್ಲಿ ಮಂಗಳವಾರ ನಡೆದ ಸಭೆಯಲ್ಲಿ ಸಮಿತಿಯ ಅಧ್ಯಕ್ಷೆಯಾಗಿ ಶಾಕಿರಾ ಫರಂಗಿಪೇಟೆ, ಕಾರ್ಯದರ್ಶಿಯಾಗಿ ಫೌಝಿಯಾ ಆಲಾಡಿ, ಜೊತೆ ಕಾರ್ಯದರ್ಶಿಯಾಗಿ ಯಾಸ್ಮೀನ್ ಕಾರಾಜೆ ಆಯ್ಕೆಯಾಗಿದ್ದಾರೆ.
ಸಮಿತಿಯ ಸದಸ್ಯರಾಗಿ ಸಬೀನ ನಂದಾವರ, ಶೈನಾಝ್ ಕಾವಳಕಟ್ಟೆ, ಫೌಝಿಯಾ ತುಂಬೆ, ನುಸೈದಾ ಅಕ್ಕರಂಗಡಿ, ರುಫೈದಾ ಶಾಂತಿಅಂಗಡಿ, ಫೌಝಿಯಾ ಮಾರಿಪಳ್ಳ ಮತ್ತು ಸುಮಯ್ಯ ಕಲ್ಲಡ್ಕ ನೇಮಕಗೊಂಡರು.
ಈ ಸಂದರ್ಭದಲ್ಲಿ ವಿಮೆನ್ ಇಂಡಿಯಾ ಮೂಮೆಂಟ್ ಜಿಲ್ಲಾ ಸಮಿತಿ ಸದಸ್ಯೆ ಮಿಶ್ರಿಯಾ ಕಣ್ಣೂರು ಮತ್ತು ಝಹನಾ ನೆಹರೂ ನಗರ ಉಪಸ್ಥಿತರಿದ್ದರು.