ಬೈಕ್ ಟ್ಯಾಕ್ಸಿ ಕಾನೂನುಬಾಹಿರ: ಸಾರಿಗೆ ಇಲಾಖೆ

Update: 2022-02-23 13:04 GMT
ಸಾಂದರ್ಭಿಕ ಚಿತ್ರ

ಬೆಂಗಳೂರು, ಫೆ.23: ಅಗ್ರಿಗೇಟರ್ ಆ್ಯಪ್‍ಗಳನ್ನು ಬಳಸಿಕೊಂಡು ಬೈಕ್‍ಟ್ಯಾಕ್ಸಿ ನಡೆಸುವುದು ಕಾನೂನುಬಾಹಿರವಾಗಿದ್ದು, ಈ ಸಂಬಂಧ ಕಠಿಣ ಕ್ರಮ ಜರುಗಿಸಲಾಗುವುದು ಎಂದು ಸಾರಿಗೆ ಮತ್ತು ರಸ್ತೆ ಸುರಕ್ಷತೆ ಆಯುಕ್ತರು ಎಚ್ಚರಿಕೆ ನೀಡಿದ್ದಾರೆ.

ಈ ಸಂಬಂಧ ಪ್ರಕಟನೆ ಹೊರಡಿಸಿರುವ ಅವರು, ರಾಜಧಾನಿ ಬೆಂಗಳೂರಿನಲ್ಲಿ ಇತ್ತೀಚಿಗೆ ಖಾಸಗಿ ಬೈಕ್‍ಗಳು ಕೆಲವೊಂದು ಅಗ್ರಿಗೇಟರ್ ಆ್ಯಪ್‍ಗಳನ್ನು ಬಳಸಿಕೊಂಡು ಕಾನೂನುಬಾಹಿರವಾಗಿ ಪ್ರಯಾಣಿಕರನ್ನು ಸಾಗಿಸುತ್ತಿರುವುದು ಬೆಳಕಿಗೆ ಬಂದಿದೆ. ಇಂತಹ ವಾಹನಗಳ ವಿರುದ್ಧ ಇಲಾಖೆ ಕಠಿಣ ಕ್ರಮ ಕೈಗೊಳ್ಳುತ್ತಿದೆ.

ಸಾರ್ವಜನಿಕರು ಇಂತಹ ಅಗ್ರಿಗೇಟರ್ ಆ್ಯಪ್ ಬಳಕೆ ನಿಲ್ಲಿಸಬೇಕು. ಜತೆಗೆ, ಬೈಕ್ ಮಾಲಕರು ಸಹ ತಮ್ಮ ವಾಹನಗಳನ್ನು ಇಂತಹ ಆ್ಯಪ್ ಮೂಲಕ ಬಾಡಿಗೆ ಓಡಿಸುತ್ತಿರುವುದನ್ನು ನಿಲ್ಲಿಸುವಂತೆ ಆಯುಕ್ತರು ಮನವಿ ಮಾಡಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News