ಬೆಂಗಳೂರು: ಸಿಸಿಬಿಯ ಎಎಸ್ಸೈ ಸೇರಿ 26 ಮಂದಿ ಸಿಬ್ಬಂದಿಯ ವರ್ಗಾವಣೆ
Update: 2022-02-23 18:48 IST
ಬೆಂಗಳೂರು, ಫೆ.23: ಬೆಂಗಳೂರಿನ ಸಿಸಿಬಿಯ ವಿವಿಧ ವಿಭಾಗಗಳಲ್ಲಿ ಕಾರ್ಯನಿರ್ವಹಿಸುತ್ತಿರುವ ಎಎಸ್ಸೈ ಸೇರಿದಂತೆ 26 ಮಂದಿ ಸಿಬ್ಬಂದಿಯನ್ನು ವರ್ಗಾಯಿಸಿ ನಗರ ಪೊಲೀಸ್ ಇಲಾಖೆಯ ಆಡಳಿತ ವಿಭಾಗದ ಡಿಸಿಪಿ ನಿಶಾ ಜೇಮ್ಸ್ ಆದೇಶ ಹೊರಡಿಸಿದ್ದಾರೆ.
ಎಎಸ್ಸೈ, ಹೆಡ್‍ಕಾನ್‍ಸ್ಟೇಬಲ್ ಹಾಗೂ ಕಾನ್‍ಸ್ಟೇಬಲ್ ಸೇರಿದಂತೆ 26 ಸಿಬ್ಬಂದಿಯನ್ನು ನಗರದ ವಿವಿಧ ಪೊಲೀಸ್ ಠಾಣೆಗಳಿಗೆ ವರ್ಗಾವಣೆ ಮಾಡಲಾಗಿದೆ.
ಒಒಡಿ ಮೇಲೆ ಕಾರ್ಯನಿರ್ವಹಿಸುತ್ತಿರುವ ಸಿಬ್ಬಂದಿಯನ್ನು ವರ್ಗಾವಣೆ ಮಾಡಿ, ಸೂಚಿಸಿದ ಪ್ರದೇಶಗಳಲ್ಲಿ ವರದಿ ಮಾಡಿಕೊಂಡು ಪಾಲನಾ ವರದಿ ಕಳುಹಿಸುವಂತೆ ಆದೇಶಿಸಲಾಗಿದೆ.