×
Ad

ಶಾಸಕ, ಸಚಿವರ ಆಪ್ತ ಸಹಾಯಕರಿಗೆ ಭತ್ಯೆ ನೀಡುವಂತೆ ಸಿಎಂ ಬೊಮ್ಮಾಯಿಗೆ ಮನವಿ

Update: 2022-02-24 09:30 IST

ಬೆಂಗಳೂರು: ಶಾಸಕರು ಮತ್ತು ಸಚಿವರುಗಳ ಆಪ್ತ ಸಹಾಯಕರಿಗೆ ತುಟ್ಟಿ ಭತ್ಯೆ ಹಾಗೂ ಅಧಿವೇಶನ ಸಮಯದಲ್ಲಿ  ಸಚಿವಾಲಯದ ಸಿಬ್ಬಂದಿಗೆ ನೀಡುವ ಅಧಿವೇಶನ ಭತ್ಯೆಯನ್ನು ತಮಗೂ ನೀಡಬೇಕು ಎಂದು ಕರ್ನಾಟಕ ರಾಜ್ಯ ವಿಧಾನಸಭೆ ಮತ್ತು ವಿಧಾನ ಪರಿಷತ್ ಸದಸ್ಯರ ಖಾಸಗಿ ಆಪ್ತ ಸಹಾಯಕರ ಸಂಘದ ಸದಸ್ಯರು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿಗೆ ಮನವಿ ಮಾಡಿದ್ದಾರೆ.

ಸಂಘದ ಪ್ರಧಾನ ಕಾರ್ಯದರ್ಶಿ ಪ್ರವೀಣ್‌ಕುಮಾರ್ ಸಾಲಿಮಠ ನೇತೃತ್ವದಲ್ಲಿ ಮುಖ್ಯಮಂತ್ರಿ ವಿಧಾನಸಭಾಧ್ಯಕ್ಷ ವಿಶ್ವೇಶ್ವರ ಹೆಗಡೆ ಕಾಗೇರಿ, ಸಭಾಪತಿ ಬಸವರಾಜ ಹೊರಟ್ಟಿ ಅವರಿಗೆ ಮನವಿ ಸಲ್ಲಿಸಿದ್ದು, ಹಿಂದಿನ ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ಅವರಿಗೆ ಶಾಸಕರು ಮತ್ತು ಸಚಿವರ ಖಾಸಗಿ ಆಪ್ತ ಸಹಾಯಕರಿಗೆ ತುಟ್ಟಿ ಭತ್ಯೆ ಮತ್ತು ಅಧಿವೇಶನ ಭತ್ಯೆ ನೀಡುವಂತೆ ಮಾಡಿಕೊಂಡ ಮನವಿಗೆ ಅವರು ಸ್ಪಂದಿಸಿ ಮಂಜೂರು ಮಾಡುವಂತೆ ಸೂಚಿಸಿದ್ದರು. 

ಆದರೆ, ಈ ಕಡತ ಹಣಕಾಸು ಇಲಾಖೆಯಲ್ಲಿ ಅನುಮೋದನೆಯಾಗದೆ ಹಾಗೇ ಉಳಿದುಕೊಂಡಿದ್ದು, ಶೀಘ್ರವೇ ಅನುಮೋದನೆಗೊಳಿಸಿ ಆದೇಶ ಹೊರಡಿಸುವಂತೆ ಸಂಬಂಧಿಸಿದವರಿಗೆ ಸೂಚಿಸುವಂತೆ ಮನವಿ ಪತ್ರದಲ್ಲಿ ತಿಳಿಸಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News