×
Ad

ಉಳ್ಳಾಲ: ಭಾರತ್ ಸ್ಕೂಲ್ ನಲ್ಲಿ ಹಿಜಾಬ್ ಧರಿಸಿದ ವಿದ್ಯಾರ್ಥಿನಿಯರಿಗೆ ತರಗತಿ ಪ್ರವೇಶ ನಿರಾಕರಣೆ

Update: 2022-02-24 12:36 IST

ಉಳ್ಳಾಲ: ಹಿಜಾಬ್ ಧರಿಸಿ ತರಗತಿಗೆ ವಿದ್ಯಾರ್ಥಿಗಳನ್ನು ಹಾಜರು ಪಡಿಸುವ ವಿಚಾರ ದಲ್ಲಿ ಸರ್ಕಾರ ದ ಆಕ್ಷೇಪ ಹಾಗೂ ಈ ಬಗ್ಗೆ ಕೋರ್ಟ್ ನಲ್ಲಿ ವಿಚಾರಣೆ  ಸಂಬಂಧಿಸಿದ  ಹಿನ್ನೆಲೆಯಲ್ಲಿ ತರಗತಿಗೆ ಹಿಜಾಬ್ ಹಾಕಿ ಕೊಂಡು ಬರಬಾರದು ಎಂದು ಶಿಕ್ಷಕಿಯೋರ್ವರು ವಿದ್ಯಾರ್ಥಿನಿಯರಿಗೆ ಸೂಚಿಸಿದ್ದು,  ವಿದ್ಯಾರ್ಥಿನಿ ಯರು ತರಗತಿಯಿಂದ ಹೊರ ನಡೆದ ಘಟನೆ ಉಳ್ಳಾಲ ಭಾರತ್ ಸ್ಕೂಲ್ ನಲ್ಲಿ ನಡೆದಿದೆ.

ಗುರುವಾರ ವಿದ್ಯಾರ್ಥಿನಿಯರು ಎಂದಿನಂತೆ ಹಿಜಾಬ್ ಧರಿಸಿ ತರಗತಿಗೆ ಹಾಜರಾಗಿದ್ದರು. ಈ ವೇಳೆ ಶಿಕ್ಷಕಿ ತರಗತಿಗೆ ಹಾಜರಾದ ಸಂದರ್ಭದಲ್ಲಿ ಹಿಜಾಬ್ ಧರಿಸಬಾರದು ಎಂದು ಸರ್ಕಾರ ದ ಆದೇಶ ಇದೆ. ಈ ಬಗ್ಗೆ ಕೋರ್ಟ್ ನಲ್ಲಿ ವಿಚಾರಣೆ ನಡೆಯುತ್ತಿದೆ ಈ ಕಾರಣದಿಂದ ಹಿಜಾಬ್ ಧರಿಸದೆ ಬರುವಂತೆ ಸೂಚಿಸಿದರು ಎನ್ನಲಾಗಿದೆ.ಇದಕ್ಕೆ ಆಕ್ಷೇಪ ವ್ಯಕ್ತಪಡಿಸಿದ ವಿದ್ಯಾರ್ಥಿನಿಯರು ಈ ವಿಚಾರ ನಮ್ಮಲ್ಲಿ ಹೇಳುವುದು ಅಲ್ಲ, ಪೋಷಕರಲ್ಲಿ ಹೇಳಬೇಕು ಎಂದಿದ್ದಾರೆ.

ಈ ವೇಳೆ ಹಾಜರಾದ ಆಡಳಿತ ಮಂಡಳಿ ಹಿಜಾಬ್ ಧರಿಸಿ ತರಗತಿಗೆ ಬರಲು ಅವಕಾಶ ಇಲ್ಲ ಎಂದು ಹೇಳಿದ್ದು ಇದರಿಂದ ಕೆರಳಿದ  ಕೆಲವು ವಿದ್ಯಾರ್ಥಿನಿ ಯರು ತರಗತಿಯಿಂದ ಹೊರ ಬಂದು ನ್ಯಾಯ ಕ್ಕಾಗಿ ಹೋರಾಟ ನಡೆಸಿದರು. ಈ‌ಸಂದರ್ಭ ಕೆಲವು ಪೋಷಕರು ಹಾಜರಾಗಿದ್ದು, ಈ ಬಗ್ಗೆ ಮಾಹಿತಿ ಪಡೆದ ಉಳ್ಳಾಲ ಇನ್ಸ್ಪೆಕ್ಟರ್ ಸಂದೀಪ್ ನೇತೃತ್ವದ ತಂಡ ಘಟನಾ ಸ್ಥಳಕ್ಕೆ ಆಗಮಿಸಿ ಪರಿಸ್ಥಿತಿ ನಿಯಂತ್ರಿಸಿದ್ದು, ಹಿಜಾಬ್ ವಿಚಾರಕ್ಕೆ ಸಂಬಂಧಿಸಿ ಭಾರತ ಸ್ಕೂಲ್ ಆಡಳಿತ ಮಂಡಳಿ ಪೋಷಕರ ಸಭೆ ಕರೆದಿದೆ.

ಪೋಷಕರ ಸಭೆ 

ಸದ್ಯದ ಮಟ್ಟಿಗೆ ಪೋಷಕರ ಸಭೆಯಲ್ಲಿ  ಇತ್ಯರ್ಥ ಪಡಿಸಲಾಗಿದೆ. ಇಂದೊಂದು ದಿನ ಹಿಜಾಬ್ ಧರಿಸಲು ಆಡಳಿತ ಮಂಡಳಿ  ಅವಕಾಶ  ನೀಡಿದ್ದು, ಹಿಜಾಬ್ ಧರಿಸಿ ಬರುವ ವಿಚಾರಕ್ಕೆ ಸಂಬಂಧಿಸಿ ಭಾರತ ಸ್ಕೂಲ್ ಆಡಳಿತ ಮಂಡಳಿ ಪ್ರತ್ಯೇಕ ಸಭೆ ನಡೆಸಿ ನಿರ್ಧಾರ ಕ್ಕೆ ಬರಲು ತೀರ್ಮಾನ ಕೈಗೊಂಡಿದೆ. ಉರೂಸ್ ನಡೆಯುವ ಹಿನ್ನೆಲೆಯಲ್ಲಿ  ಗೊಂದಲಕ್ಕೆ ಅವಕಾಶ ನೀಡದಂತೆ ಪೋಷಕರು ಈ ಸಂದರ್ಭದಲ್ಲಿ ಆಡಳಿತ ಮಂಡಳಿ ಗೆ ಸೂಚಿಸಿದ್ದು, ಈ ಸಮಸ್ಯೆ ಗೆ ಪರಿಹಾರವಾಗಿ ಆಡಳಿತ ಮಂಡಳಿ ಸಭೆ ನಡೆಸಲಿದೆ ಎಂದು ತಿಳಿದು ಬಂದಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News