×
Ad

ಬೆಳ್ತಂಗಡಿ: ಮಸೀದಿಗೆ ಬಿಯರ್ ಬಾಟಲಿ ಎಸೆದು ದಾಂಧಲೆ

Update: 2022-02-24 15:01 IST

ಬೆಳ್ತಂಗಡಿ;  ಮಸೀದಿಗೆ ದುಷ್ಕರ್ಮಿಗಳ ತಂಡವೊಂದು ಬಿಯರ್ ಬಾಟಲಿ ಎಸೆದು ದಾಂಧಲೆ ನಡೆಸಿರುವ ಘಟನೆ ಬೆಳ್ತಂಗಡಿ ತಾಲೂಕಿನ ಮುರ ಜುಮ್ಮಾ ಮಸೀದಿಯಲ್ಲಿ ನಡೆದಿದೆ.

ಬುಧವಾರ ತಡ ರಾತ್ರಿಯವೇಳೆ ದಯಷ್ಕರ್ಮಿಗಳು ಮಸೀದಿಯ ಆವರಣದೊಳಗೆ ಬಿಯರ್ ಬಾಟಲಿ ಎಸೆದಿದ್ದಾರೆ. ಆವರಣದಲ್ಲಿ ನಿಲ್ಲಿಸಲಾಗಿದ್ದ ಕಾರಿನ ಮೇಲೇ ಬಿಯರ್ ಬಾಟ್ಲಿಗಳು ಬಿದ್ದಿರುವುದಾಗಿ ತಿಳಿದು ಬಂದಿದೆ.

ದುಷ್ಕರ್ಮಿಗಳ ಕುಕೃತ್ಯವು ಸ್ಥಳದಲ್ಲಿದ ಸಿಸಿಟಿವಿಯಲ್ಲಿ ಸೆರೆಯಾಗಿದೆ. ಮಸೀದಿಯೊಳಗೆ ಬಿಯರ್ ಬಾಟ್ಲಿ ಎಸೆದಿರುವುದು ಸ್ಥಳೀಯರಲ್ಲಿ ಆತಂಕ ಮೂಡಿಸಲು ಕಾರಣವಾಗಿದೆ.

ಸ್ಥಳಕ್ಕೆ ಬೆಳ್ತಂಗಡಿ ಪೊಲೀಸರು ತೆರಳಿ ಪರಿಶೀಲನೆ ನಡೆಸಿದ್ದಾರೆ. ಕೃತ್ಯ ಎಸಗಿದವರ ಬಗ್ಗೆ ಯಾವುದೇ ಮಾಹಿತಿಗಳು ತಿಳಿದು ಬಂದಿಲ್ಲ

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News