×
Ad

ಬೆಂಗಳೂರು: ಹೊಟ್ಟೆಯಲ್ಲಿ 1 ಕೆಜಿ ಹೆರಾಯಿನ್ ಸಾಗಾಟ; ಆರೋಪಿ ವಿದೇಶಿ ಪ್ರಜೆಯ ಬಂಧನ

Update: 2022-02-24 17:45 IST

ಬೆಂಗಳೂರು, ಫೆ.24: ಹೊಟ್ಟೆಯಲ್ಲಿ 7 ಕೋಟಿ ಮೌಲ್ಯದ 1 ಕೆಜಿ ಹೆರಾಯಿನ್ ಸಾಗಿಸುತ್ತಿದ್ದ ಆರೋಪದಡಿ ವಿದೇಶಿ ಪ್ರಜೆಯೋರ್ವನನ್ನು ಇಲ್ಲಿನ ದೇವನಹಳ್ಳಿಯ ಕೆಂಪೇಗೌಡ ಅಂತರ್‍ರಾಷ್ಟ್ರೀಯ ವಿಮಾನ ನಿಲ್ದಾಣದ ಕಸ್ಟಮ್ಸ್ ಅಧಿಕಾರಿಗಳು ಬಂಧಿಸಿದ್ದಾರೆ.

ಶಾರ್ಜಾದಿಂದ ಬೆಂಗಳೂರು ಕೆಂಪೇಗೌಡ ಅಂತರ್‍ರಾಷ್ಟ್ರೀಯ ವಿಮಾನ ನಿಲ್ದಾಣಕ್ಕೆ ಆಗಮಿಸಿದ 32 ವರ್ಷದ ಉಗಾಂಡಾದ ಪ್ರಜೆಯನ್ನು ಅಧಿಕಾರಿಗಳು ವಶಕ್ಕೆ ತಪಾಸಣೆ ನಡೆಸಿ ಬಂಧಿಸಿದ್ದಾರೆ.

ಈತನನ್ನು ಆಸ್ಪತ್ರೆಗೆ ದಾಖಲಿಸಿ ಆತನ ಹೊಟ್ಟೆಯಿಂದ 3 ದಿನಗಳ ಅವಧಿಯಲ್ಲಿ 79 ಮಾತ್ರೆ ಹೊರಗೆ ತೆಗೆಯಲಾಗಿದೆ. ಹೆರಾಯಿನ್ ತುಂಬಿದ ಮಾತ್ರೆಗಳನ್ನು ನುಂಗಿ ಆತ ಕಳ್ಳಸಾಗಣೆ ಮಾಡುತ್ತಿದ್ದ ಎನ್ನುವ ಮಾಹಿತಿ ಬೆಳಕಿಗೆ ಬಂದಿದೆ.

ಒಟ್ಟಾರೆ, 7 ಕೋಟಿ ಮೌಲ್ಯದ 1 ಕೆಜಿ ಹೆರಾಯಿನ್ ವಶಕ್ಕೆ ಪಡೆದು ಆತನ ವಿರುದ್ಧ ಎನ್‍ಡಿಪಿಎಸ್ ಕಾಯ್ದೆ ಅಡಿ ಪ್ರಕರಣ ದಾಖಲಾಗಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News