ಬೆಂಗಳೂರು ನಗರದಲ್ಲಿ ಫೆ.25ರಿಂದ ಮೂರು ದಿನಗಳವರೆಗೆ ವಿದ್ಯುತ್ ವ್ಯತ್ಯಯ

Update: 2022-02-24 17:28 GMT
ಸಾಂದರ್ಭಿಕ ಚಿತ್ರ

ಬೆಂಗಳೂರು, ಫೆ.24: ವಿದ್ಯುತ್ ಕಾಮಗಾರಿ ನಡೆಯುತ್ತಿರುವುದರಿಂದ ಫೆ.25ರಿಂದ ಮೂರು ದಿನಗಳ ಕಾಲ(ಫೆ.27ರವರೆಗೆ) ಬೆಳಗ್ಗೆ 10ರಿಂದ ಸಂಜೆ 5ರವರೆಗೆ ನಗರದ ಕೆಲ ಪ್ರದೇಶಗಳ ವಿದ್ಯುತ್ ಪೂರೈಕೆಯಲ್ಲಿ ವ್ಯತ್ಯಯವಾಗಲಿದೆ ಎಂದು ಬೆಸ್ಕಾಂ ತಿಳಿಸಿದೆ.

ನಗರದ ದಕ್ಷಿಣ ವಲಯದ ಕೆ.ಆರ್. ರಸ್ತೆ, 8ನೇ ಬ್ಲಾಕ್ ಜಯನಗರ, ಇಸ್ರೋ ಲೇಔಟ್, ಗೌಡನಪಾಳ್ಯ, ಸಿದ್ದಾಪುರ, ಸೋಮೇಶ್ವರನಗರ, ಜೆಪಿ ನಗರ, ಶಾಕಾಂಬರಿ ನಗರ, ಸಾರಕ್ಕಿ ಮಾರುಕಟ್ಟೆ, ಪುಟ್ಟೇನಹಳ್ಳಿ ಮುಖ್ಯರಸ್ತೆ, ವಿಲ್ಸನ್ ಗಾರ್ಡನ್ ನಗರ ಸೊಸೈಟಿ, ಗಣಪತಿ ಪುರ, ಓಲ್ಡ್ ಬ್ಯಾಂಕ್ ಕಾಲನಿ, ಟೀಚರ್ಸ್ ಕಾಲನಿ, ಬೀರೇಶ್ವರ ನಗರ, ಕೋಣನಕುಂಟೆ ಕೈಗಾರಿಕಾ ಪ್ರದೇಶ, ಚೆನ್ನಮ್ಮನಕೆರೆ ವೃತ್ತ, ಜೈ ಭೀಮಾ ನಗರ ಸೇರಿದಂತೆ ಸುತ್ತಮುತ್ತಲಿನ ಪ್ರದೇಶಗಳಲ್ಲಿ ವಿದ್ಯುತ್ ವ್ಯತ್ಯವಾಗಲಿದೆ.

ನಗರದ ಉತ್ತರ ವಲಯದ ಶ್ರೀರಾಮಪುರಂ 7ನೇ ಮುಖ್ಯರಸ್ತೆ, ಯಶವಂತಪುರ ಗುರುಮೂರ್ತಿ ರೆಡ್ಡಿ ಕಾಲನಿ ಭಾಗಗಳು, ಅಂಬೇಡ್ಕರ್ ನಗರ, ಬಿ.ಕೆ.ನಗರ, ಮೋಹನ್ ಕುಮಾರ್ ನಗರ, ಪಂಪಾ ನಗರ, ಚಿಕ್ಕಬಾಣಾವರ ಹಳೆ ರೈಲು ನಿಲ್ದಾಣ ರಸ್ತೆ, ಕೆರೆಗುಡ್ಡದಹಳ್ಳಿ, ದಾಸಪ್ಪನಪಾಳ್ಯ, ಸೋಮಶೆಟ್ಟಿಹಳ್ಳಿ, ಗಾಣಿಗರಹಳ್ಳಿ, ಮುನೇಶ್ವರ, ಸ್ವಾಮಿಕಲಾಯನಗರ, ಮಲ್ಲಸಂದ್ರ, ಹೆಸರಘಟ್ಟ ಮುಖ್ಯರಸ್ತೆ, ಭುವನೇಶ್ವರಿ ನಗರ ಮತ್ತು ಟಿ ದಾಸರಹಳ್ಳಿ ಸೇರಿದಂತೆ ಸುತ್ತಮುತ್ತಲಿನ ಪ್ರದೇಶಗಳಲ್ಲಿ ವಿದ್ಯುತ್ ವ್ಯತ್ಯಯವಾಗಲಿದೆ.

ಪೂರ್ವ ವಲಯದ ಜೋಗುಪಾಳ್ಯ, ಗೋವಿಂದಪುರ, ಒಡ್ಡರಪಾಳ್ಯ, ವೈಟ್ ಫೀಲ್ಡ್ ಮುಖ್ಯರಸ್ತೆ, ಚನ್ನಸದ್ರ, ಸಾದರಮಂಗಲ ಮತ್ತು ಕೊಡಿಗೇಹಳ್ಳಿ ಸೇರಿದಂತೆ ಸುತ್ತಮುತ್ತಲಿನ ಪ್ರದೇಶಗಳಲ್ಲಿ ವಿದ್ಯುತ್ ವ್ಯತ್ಯವಾಗಲಿದೆ.

ಪಶ್ಚಿಮ ವಲಯದ ಬಿಎಚ್‍ಇಎಲ್ ಟೌನ್‍ಶಿಪ್, ಸುಬ್ಬಣ್ಣ ಗಾರ್ಡನ್, ಗಂಗೊಂಡನಹಳ್ಳಿ, ಅತ್ತಿಗುಪ್ಪೆ ಭಾಗಗಳು, ವಿಘ್ನೇಶ್ವರ ನಗರ, ಸಣ್ಣಕ್ಕಿ ಬಯಲು, ಪಾಪರೆಡ್ಡಿ ಪಾಳ್ಯ, ಶ್ರೀನಗರ, ತ್ಯಾಗರಾಜನಗರ, ಉತ್ತರಹಳ್ಳಿ ರಸ್ತೆ, ಕೋಣಚಂದ್ರ ರಸ್ತೆ, ಕೋಡಿಪಾಳ್ಯ, ಸುರಾನಾ ನಗರ, ವೇಣು ನಗರ, ವೇಣು ನಗರ, ವೇಣು ನಗರ ಸೇರಿದಂತೆ ಸುತ್ತಮುತ್ತಲಿನ ಪ್ರದೇಶಗಳಲ್ಲಿ ವಿದ್ಯುತ್ ವ್ಯತ್ಯಯವಾಗಲಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News