ಕಾಜೂರು ಉರೂಸ್ ಪ್ರಯುಕ್ತ 'ಮುತ‌ಅಲ್ಲಿಂ ಸಂಗಮ', ಹಿರಿಯ ವಿದ್ವಾಂಸರಿಗೆ ಸನ್ಮಾನ

Update: 2022-02-25 04:03 GMT

ಬೆಳ್ತಂಗಡಿ, ಫೆ.25: ಹಯಾತುಲ್ ಔಲಿಯಾ ದರ್ಗಾ ಶರೀಫ್ ಕಾಜೂರು ಮಖಾಂ ಉರೂಸ್ ಪ್ರಯುಕ್ತ 'ಮುತ‌ಅಲ್ಲಿಂ ಸಂಗಮ' ಕಾರ್ಯಕ್ರಮವು ಗುರುವಾರ ರಾತ್ರಿ ಜರುಗಿತು.

ಕಾಜೂರು ಉರೂಸ್ ಸಮಿತಿ ಅಧ್ಯಕ್ಷ ಕೆ.ಯು.ಇಬ್ರಾಹೀಂ ಅಧ್ಯಕ್ಷತೆ ವಹಿಸಿದ್ದ ಸಮಾರಂಭವನ್ನು ಕರ್ನಾಟಕ ಜಂಇಯ್ಯತುಲ್ ಉಲಮಾ ರಾಜ್ಯ ಉಪಾಧ್ಯಕ್ಷ ಯು.ಕೆ ಮುಹಮ್ಮದ್ ಸ‌ಅದಿ ವಳವೂರು ಉದ್ಘಾಟಿಸಿದರು‌.

ಇದೇವೇಳೆ ವಳವೂರು ಉಸ್ತಾದ್ ಹಾಗೂ ಹಿರಿಯ ವಿದ್ವಾಂಸ ಬಿ.ಎಚ್.ಅಬೂ ಸ್ವಾಲಿಹ್ ಮುಸ್ಲಿಯಾರ್ ಮುದರ್ರಿಸ್ ಆಲಡ್ಕ ಇವರಿಬ್ಬರನ್ನು ಸನ್ಮಾನಿಸಲಾಯಿತು.

ಸಮಾರಂಭದಲ್ಲಿ ಕಾಜೂರು ತಂಙಳ್ ಅವರ ದರ್ಸ್ ಶಿಷ್ಯವರ್ಗದವರ ಸಂಘಟನೆಯಾದ ಇರ್ಶಾದ್‌ತ್ತುಲ್ಬಾಬ್ ಹಳೆವಿದ್ಯಾರ್ಥಿ ಸಂಘದ ಅಧ್ಯಕ್ಷ ಅಬ್ದುರ್ರಝಾಕ್ ಇಮ್ದಾದಿ ನಾವೂರು, ಉಮರುಲ್ ಫಾರೂಕ್ ಸಖಾಫಿ ಬಕ್ರಹಳ್ಳಿ  ಪ್ರಸ್ತಾವನೆಗೈದರು.

ಉರ್ದುವಿನಲ್ಲಿ ಇಬ್ರಾಹೀಂ ನ‌ಈಮಿ ಮಾಗುಂಡಿ, ಕನ್ನಡದಲ್ಲಿ ಸಿದ್ದೀಕ್ ಮು‌ಈನಿ ಉಳ್ತೂರು, ಅರೆಬಿಕ್ ಭಾಷೆಯಲ್ಲಿ ಶಾಹುಲ್ ಹಮೀದ್ ಮು‌ಈನಿ ಕನ್ಯಾಡಿ  ಬುರ್ದಾ ಆಲಾಪನೆಯನ್ನು ಇಲಲ್ ಮದೀನಾ ಬುರ್ದಾ ಸಮಿತಿಯ‌ ವತಿಯಿಂದ ಸಿದ್ದೀಕ್ ಜೌಹರಿ ತೆಕ್ಕಾರ್ ನಡೆಸಿಕೊಟ್ಟರು. 

ಕಾಜೂರು ಶಿಕ್ಷಣ ಸಂಸ್ಥೆಗಳ ಪ್ರಾಚಾರ್ಯ ಸೈಯದ್ ಕಾಜೂರು ತಂಙಳ್ ದುಆ ಪ್ರಾರ್ಥನೆಗೆ ನೇತೃತ್ವ ನೀಡಿದರು.

ಹಿರಿಯ ವಿದ್ಯಾರ್ಥಿಗಳ ಪರವಾಗಿ ಕಾಜೂರು ತಂಙಳ್ ರನ್ನು ನಿಲುವಂಗಿ ತೊಡಿಸಿ ಸನ್ಮಾನಿಸಿದರೆ, ಕಾಜೂರು ಉರೂಸ್ ಸಮಿತಿ ಅಧ್ಯಕ್ಷ ಕೆ.ಯು ಇಬ್ರಾಹೀಂ ಮತ್ತು ಪ್ರ‌ ಕಾರ್ಯದರ್ಶಿ ಅಬೂಬಕರ್ ಸಿದ್ದೀಕ್ ಅವರನ್ನು ಗೌರವಿಸಲಾಯಿತು. ಬಳಿಕ ಕಾಜೂರು ದರ್ಗಾದ ವತಿಯಿಂದ ಹಳೆ ವಿದ್ಯಾರ್ಥಿಗಳನ್ನು ಗೌರವಿಸಲಾಯಿತು.

ಉಮರುಲ್ ಫಾರೂಕ್ ಸಖಾಫಿ ಹಿಮಮಿ ಕುಪ್ಪೆಟ್ಟಿ  ಕಿರಾಅತ್ ಪಠಿಸಿದರು. ಕಿಲ್ಲೂರು ಮುದರ್ರಿಸ್ ರಫೀಕ್ ಸ‌ಅದಿ ಉಪಸ್ಥಿತರಿದ್ದರು. ಕಾಜೂರು ಸಹಾಯಕ ಧರ್ಮಗುರು ರಶೀದ್ ಮದನಿ ಕಾರ್ಯಕ್ರಮ ನಿರೂಪಿಸಿದರು.

ವೇದಿಕೆಯಲ್ಲಿ ಉರೂಸ್ ಸಮಿತಿಯ ಪ್ರಧಾನ ಕಾರ್ಯದರ್ಶಿ ಜೆ.ೆಚ್ ಅಬೂಬಕ್ಕರ್ ಸಿದ್ದೀಕ್ ಕಾಜೂರು, ಕೋಶಾಧಿಕಾರಿ ಕೆ.ಎಂ. ಕಮಾಲ್ ಕಾಜೂರು, ಉಪಾಧ್ಯಕ್ಷ ಬಿ.ಎಚ್ ಅಬೂಬಕರ್ ಹಾಜಿ, ಜೊತೆ ಕಾರ್ಯದರ್ಶಿ ಅಶ್ರಫ್ ಕಿಲ್ಲೂರು, ಮಾಜಿ ಅಧ್ಯಕ್ಷರುಗಳಾದ ಮುಹಮ್ಮದ್ ಸಖಾಫಿ, ಇಬ್ರಾಹೀಂ ಮದನಿ ಮೊದಲಾದವರು ಉಪಸ್ಥಿತರಿದ್ದರು.

ಸಲೀಂ ಸ‌ಅದಿ ಕನ್ಯಾಡಿ ಅವರಿಗೆ ವೈದ್ಯಕೀಯ ನೆರವು ನೀಡಲಾಯಿತು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News