×
Ad

ತೊಕ್ಕೊಟ್ಟು: ಬ್ಯಾರಿ ಅಕಾಡಮಿಯ ಕಚೇರಿ ಕಟ್ಟಡ ನಿರ್ಮಾಣಕ್ಕೆ ವಿರೋಧ; ಬಿಜೆಪಿ -ಸಂಘಪರಿವಾರದಿಂದ ಪ್ರತಿಭಟನೆ

Update: 2022-02-26 12:20 IST

ಮಂಗಳೂರು, ಫೆ.26: ತೊಕ್ಕೊಟ್ಟು ಜಂಕ್ಷನ್ ಬಳಿ ನಿರ್ಮಿಸಲು ಉದ್ದೇಶಿಸಿರುವ ಬ್ಯಾರಿ ಸಾಹಿತ್ಯ ಅಕಾಡಮಿಯ ನೂತನ ಕಚೇರಿ ಕಟ್ಟಡ ನಿರ್ಮಾಣಕ್ಕೆ ವಿರೋಧ ವ್ಯಕ್ತವಾಗಿದೆ‌.

ಇಂದು ಪೂರ್ವಾಹ್ನ ಕಚೇರಿ ನಿರ್ಮಾಣಕ್ಕೆ ಶಂಕುಸ್ಥಾಪನೆ ಸಮಾರಂಭ ಹಮ್ಮಿಕೊಳ್ಳಲಾಗಿತ್ತು ಅದರಂತೆ ಎಲ್ಲಾ ಸಿದ್ಧತೆ ನಡೆಯುತ್ತಿದ್ದಾಗ ಕಾರ್ಯಕ್ರಮ ನಡೆಯುವ ಸ್ಥಳದಲ್ಲಿ ಜಮಾಯಿಸಿದ ಬಿಜೆಪಿಗರು, ಸಂಘ ಪರಿವಾರದ ಕಾರ್ಯಕರ್ತರು ಹಾಗೂ ಉಳ್ಳಾಲ ಕೌನ್ಸಿಲರ್ ದಿನಕರ ಉಳ್ಳಾಲ ನೇತೃತ್ವದ ಅಬ್ಬಕ್ಕ ಉತ್ಸವ ಸಮಿತಿಯವರು ಪ್ರತಿಭಟನೆ ನಡೆಸಿದರು. ಇದರಿಂದ ಕೆಲಕಾಲ ಗೊಂದಲದ ವಾಯಾವರಣ ಸೃಷ್ಟಿಯಾಯಿತು.

ಈ ಮಧ್ಯೆ ಕಾರ್ಯಕ್ರಮಕ್ಕೆ ಆಗಮಿಸಿದ್ದ ಶಾಸಕ, ವಿಪಕ್ಷ ಉಪನಾಯಕ ಯು.ಟಿ.ಖಾದರ್ ಅವರ ಬಳಿ ಪ್ರತಿಭಟನಾನಿರತರು ಕಾರ್ಯಕ್ರಮಕ್ಕೆ ತೆರಳದಂತೆ ಮನವಿ ಮಾಡಿದರು. ಇದೊಂದು ಸರಕಾರಿ ಕಾರ್ಯಕ್ರಮವಾದ ಕಾರಣ ಹಾಜರಾಗುವುದು ಅನಿವಾರ್ಯ ಎಂದ ಖಾದರ್ ಬಳಿಕ ನಡೆದ ಶಿಲಾನ್ಯಾಸ ನಡೆದ ಕಾರ್ಯಕ್ರಮದಲ್ಲಿ‌ ಪಾಲ್ಗೊಂಡರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News