ಕೆಸಿ ರೋಡ್ ಎಸ್‌ವೈಎಸ್‌ನಿಂದ ತಾಜುಲ್ ಫುಖಹ ಕ್ಲಾಸ್
Update: 2022-02-26 23:37 IST
ಮಂಗಳೂರು, ಫೆ.26: ಕರ್ನಾಟಕ ರಾಜ್ಯ ಸುನ್ನಿ ಯುವಜನ ಸಂಘ (ಎಸ್‌ವೈಎಸ್) ಕೆಸಿ ರೊಡ್ ಸೆಂಟರ್ ಇದರ ದಅವಾ ವಿಭಾಗದ ವತಿಯಿಂದ ಬ್ರಾಂಚ್ ವ್ಯಾಪ್ತಿಯಲ್ಲಿ ವಾರಕ್ಕೊಮ್ಮೆ ನಡೆಸಿಕೊಂಡು ಬರಲು ಉದ್ದೇಶಿಸಿದ ತಾಜುಲ್ ಫುಖಹ ಎಂಬ ಕ್ಲಾಸ್ ಉದ್ಘಾಟನೆಯು ಶುಕ್ರವಾರ ತಲಪ್ಪಾಡಿಯ ದಾರುಸ್ಸಲಾಮ್ ಮದ್ರಸ ಹಾಲ್‌ನಲ್ಲಿ ಜರುಗಿತು.
ಎಸ್‌ವೈಎಸ್ ಕೆಸಿ ರೊಡ್ ಸೆಂಟರ್ ಅಧ್ಯಕ್ಷ ಅಬ್ಬಾಸ್ ಹಾಜಿ ಅಧ್ಯಕ್ಷತೆಯಲ್ಲಿ ನಡೆದ ಕಾರ್ಯಕ್ರಮವನ್ನು ರಾಜ್ಯಾಧ್ಯಕ್ಷ ಝೈನಿ ಕಾಮಿಲ್ ಸಖಾಫಿ ಉದ್ಘಾಟಿಸಿದರು.
ಡಿಕೆ ವೆಸ್ಟ್ ಜಿಲ್ಲಾ ಎಸ್‌ವೈಎಸ್ ದಅವಾ ಕಾರ್ಯದರ್ಶಿ ಬಶೀರ್ ಮದನಿ ಕೂಳೂರು ತರಗತಿ ನಡೆಸಿದರು.
ಸೆಂಟರ್ ದಅ್ವಾ ಕಾರ್ಯದರ್ಶಿ ಮುಸ್ತಫ ಝುಹ್ರಿ ಸ್ವಾಗತಿಸಿದರು. ಸೆಂಟರ್ ಕಾರ್ಯದರ್ಶಿ ಸಿದ್ದೀಕ್ ತಲಪಾಡಿ ವಂದಿಸಿದರು.