ಗಡಾಹದ್ ರಾಮಕೃಷ್ಣ ರಾವ್
Update: 2022-02-28 19:58 IST
ಕುಂದಾಪುರ, ಫೆ.28: ಕುಂದಾಪುರದ ಹಿರಿಯ ವಕೀಲ, ಕುಂದಾಪುರ ವಕೀಲರ ಸಂಘದ ಮಾಜಿ ಅಧ್ಯಕ್ಷ, ಕುಂದಾಪುರ ಪುರಸಭೆಯ ಮಾಜಿ ಉಪಾದ್ಯಕ್ಷ ಗಡಾಹದ್ ರಾಮಕೃಷ್ಣ ರಾವ್ (87) ಅವರು ರವಿವಾರ ಇಲ್ಲಿ ನಿಧನರಾದರು.
ಜಿ.ಆರ್.ರಾವ್ ಎಂದೇ ಜನಪ್ರಿಯರಾಗಿರುವ ಇವರು, ಕುಂದಾಪುರದ ಧಾರ್ಮಿಕ, ಸಾಮಾಜಿಕ, ರಾಜಕೀಯ ಹಾಗೂ ಕ್ರೀಡಾಕ್ಷೇತ್ರಗಳಲ್ಲಿ ಸಕ್ರೀಯರಾಗಿದ್ದವರು. ಕುಂದಾಪುರದ ರೋಟರಿ ಕ್ಲಬ್, ನೆಹರೂ ಸ್ಪೋರ್ಟ್ಸ್ ಕ್ಲಬ್‌ಗಳಲ್ಲಿ ಪದಾಧಿಕಾರಿಯಾಗಿದ್ದರು. ಕುಂದೇಶ್ವರ ದೇವಸ್ಥಾನದ ಆಡಳಿತ ಮಂಡಳಿಯ ಸದಸ್ಯರಾಗಿಯೂ ಕೆಲಸ ಮಾಡಿದ್ದರು.
ರಾಮಕೃಷ್ಣ ರಾವ್ ಇಬ್ಬರು ಪುತ್ರಿಯರನ್ನು ಅಗಲಿದ್ದಾರೆ.