×
Ad

ಕಣಚೂರು ಮೆಡಿಕಲ್ ಕಾಲೇಜು ಆಸ್ಪತ್ರೆಯಲ್ಲಿ ಉಚಿತ ಆರೋಗ್ಯ ತಪಾಸಣೆ ಶಿಬಿರ

Update: 2022-02-28 23:14 IST

ಮಂಗಳೂರು, ಫೆ.28: ನಾಟೆಕಲ್‌ನಲ್ಲಿರುವ ಕಣಚೂರು ಮೆಡಿಕಲ್ ಕಾಲೇಜು ಆಸ್ಪತ್ರೆಯಲ್ಲಿ ಒಂದು ತಿಂಗಳ ಉಚಿತ ಆರೋಗ್ಯ ತಪಾಸಣಾ ಶಿಬಿರವನ್ನು ಆಯೋಜಿಸಲಾಗಿದೆ.

ವೈದ್ಯಕೀಯ ಶಾಸ್ತ್ರ ವಿಭಾಗ, ಮಕ್ಕಳ ವಿಭಾಗ, ಕ್ಷಯ ಮತ್ತು ಶ್ವಾಸಕೋಶ ವಿಭಾಗ ಹಾಗೂ ಚರ್ಮರೋಗ ವಿಭಾಗಗಳ ಸಾಮಾನ್ಯ ವಾರ್ಡ್‌ಗಳಲ್ಲಿ ಒಳರೋಗಿಯಾಗಿ ದಾಖಲಾಗುವವರಿಗಾಗಿ ಹಮ್ಮಿಕೊಂಡಿರುವ ಈ ಶಿಬಿರವು ಫೆ.28ರಿಂದ ಆರಂಭಗೊಂಡಿದ್ದು, ಮಾರ್ಚ್ 31ರವರೆಗೆ ಇರಲಿದೆ. ಈ ಅವಧಿಯಲ್ಲಿ ವೈದ್ಯಕೀಯ ಸೌಲಭ್ಯಗಳು ಔಷಧಿಯೊಂದಿಗೆ ಸಂಪೂರ್ಣ ಉಚಿತವಾಗಿರುತ್ತದೆ ಎಂದು ಆಸ್ಪತ್ರೆಯ ಪ್ರಕಟನೆ ತಿಳಿಸಿದೆ.

ಈ ಶಿಬಿರದ ಅವಧಿಯಲ್ಲಿ ಒಳರೋಗಿಗಳಿಗೆ ಲ್ಯಾಬ್ ಪರೀಕ್ಷೆಗಳು, ಎಂಆರ್‌ಐ, ಸಿ.ಟಿ., ಆಲ್ಟ್ರಾ ಸೌಂಡ್ ಸ್ಕಾನಿಂಗ್, ಮ್ಯಾಮೋಗ್ರಾಂ, ಎಕ್ಸ್ ರೇ, ಇಸಿಜಿ, ಫಿಸಿಯೋಥರೆಪಿ ಉಚಿತವಾಗಿರುತ್ತದೆ. ಸಾಮಾನ್ಯ ವಾರ್ಡ್‌ನಲ್ಲಿ ಸಾಮಾನ್ಯ ಶಸ್ತ್ರ ಚಿಕಿತ್ಸೆ ವಿಭಾಗದ ಮೂಳೆ ವಿಭಾಗದ, ಕಿವಿ-ಮೂಗು- ಗಂಟಲು ವಿಭಾಗದ ಎಲ್ಲಾ ಶಸ್ತ್ರ ಚಿಕಿತ್ಸೆಗಾಗಿ ಒಳರೋಗಿಯಾಗಿ ದಾಖಲಾಗಿರುವವರಿಗೆ ಶಸ್ತ್ರ ಚಿಕಿತ್ಸೆಗಳು, ಔಷಧಿ ಉಚಿತವಾಗಿರುತ್ತದೆ.

ಅದೇ ರೀತಿ ಒಳರೋಗಿಯಾಗಿ ದಾಖಲಾಗಿರುವ ಗರ್ಭಿಣಿಯರಿಗೆ ಸಾಮಾನ್ಯ ಹೆರಿಗೆ, ಸಿಸೇರಿಯನ್ ಹೆರಿಗೆ ಉಚಿತವಾಗಿರುತ್ತದೆ. ಗರ್ಭಕೋಶದ ಶಸ್ತ್ರಚಿಕಿತ್ಸೆ, ಕ್ಯಾನ್ಸರ್ ಕಾಯಿಲೆಯ ಚಿಕಿತ್ಸೆ (ಕಿಮೋಥೆರಪಿ, ರೇಡಿಯೋಥೆರಪಿ ಮತ್ತು ಶಸ್ತ್ರಚಿಕಿತ್ಸೆ), ಕಣ್ಣಿನ ಪೊರೆ ಶಸ್ತ್ರಚಿಕಿತ್ಸೆಯೂ ಉಚಿತವಾಗಿರುತ್ತದೆ.

ಐಸಿಯು, ರೂಮ್ ವೆಚ್ಚದಲ್ಲಿ 50 ಶೇ. ರಿಯಾಯಿತಿ ಇರಲಿದೆ. ಹೆಚ್ಚಿನ ಮಾಹಿತಿಗೆ ಮೊ.ಸಂ.: 7353774782, 7353775782 ಅಥವಾ 7349479888 ಅನ್ನು ಸಂಪರ್ಕಿಸುವಂತೆ ಪ್ರಕಟನೆ ತಿಳಿಸಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News