×
Ad

ಮಾ.3,4: ದಾರುಲ್ ಮುಸ್ತಫಾ ಮೋರಲ್ ಅಕಾಡಮಿ ಸದನದುದಾನ ಸಮ್ಮೇಳನ

Update: 2022-03-02 17:43 IST

ಪುತ್ತೂರು: ಬಂಟ್ವಾಳ ತಾಲೂಕಿನ ಕಡೇಶಿವಾಲ್ಯ ನೆಚ್ಚಬೆಟ್ಟು ಇದರ 7ನೇ ವಾರ್ಷಿಕ ಹಾಗೂ 2ನೇ ಸನದುದಾನ ಮಹಾ ಸಮ್ಮೇಳನ ಮಾ.3 ಮತ್ತು 4ರಂದು ಅಕಾಡಮಿ ವಠಾರದಲ್ಲಿ ನಡೆಯಲಿದೆ ಎಂದು ಸಂಸ್ಥೆಯ ಮೆನೇಜರ್ ಎಂ.ಎಂ. ಮಅ್ ರೂಫ್ ಸುಲ್ತಾನಿ ಆತೂರು ತಿಳಿಸಿದ್ದಾರೆ. 

ಅವರು ಬುಧವಾರ ಪುತ್ತೂರು ಪ್ರೆಸ್‍ಕ್ಲಬ್‍ನಲ್ಲಿ ಸುದ್ದಿಗೋಷ್ಠಿಯಲ್ಲಿ ಮಾತನಾಡಿ ಮಾ.3ರಂದು ಬೆಳಗ್ಗೆ ಸಮ್ಮೇಳನ ಸ್ವಾಗತ ಸಮಿತಿ ಅಧ್ಯಕ್ಷ ಕರುವೇಲು ಸಾದಾತ್ ತಂಙಳ್ ಧ್ವಜಾರೋಹಣ ನೆರವೇರಿಸಲಿದ್ದಾರೆ. ಬಳಿಕ ಪೆರ್ಣೆ ಅಬ್ಬಾಸ್ ಸಅದಿ ಉಸ್ತಾದ್ ನೇತೃತ್ವದಲ್ಲಿ ಮಡುವೂರು ಮೌಲಿದ್ ನಡೆಯಲಿದೆ. ಆ ಬಳಿಕ ಸುಲ್ತಾನಿಯಾ ಅರಬಿಕ್ ಕಾಲೇಜ್‍ನ ನೂತನ ಕಟ್ಟಡ ಉದ್ಘಾಟನೆ ಹಾಗೂ ಜಲಾಲಿಯ್ಯಾ ರಾತೀಬ್ ನಡೆಯಲಿದೆ. ಅಸ್ಸಯ್ಯಿದ್ ಇಬ್ನು ಮೌಲಾನಾ ತಂಙಳ್ ಮತ್ತು ಕುಂಬೋಳ್ ಜಅಫರ್  ತಂಙಳ್ ಭಾಗವಹಿಸಲಿದ್ದಾರೆ. 

ಅಪರಾಹ್ನ ಮುತಲ್ಲಿಂ ಸಂಗಮ ನಡೆಯಲಿದ್ದು, ಮುಹಿಯುದ್ದೀನ್ ಖಾಮಿಲ್ ಸಖಾಫಿ ತೋಕೆ ಉಸ್ತಾದರು ತರಗತಿ ಮಂಡನೆ ಮಾಡಲಿದ್ದಾರೆ. ರಾತ್ರಿ ಉಮರ್ ಹಾಜಿ ಬಾಳೆಪುಣಿ ನೇತೃತ್ವದಲ್ಲಿ ದಫ್ ರಾತೀಬ್ ನಡೆಯಲಿದೆ. ಬಳಿಕ ಡಾ, ಮುಹಮ್ಮದ್ ಫಾರೂಕ್ ನಈಮಿ ಮುಖ್ಯ ಪ್ರಭಾಷಣ ನೀಡಲಿದ್ದಾರೆ. 

ಮಾ.4ರಂದು ಅಪರಾಹ್ನ ಫ್ಯಾಮಿಲಿ ಮೀಟ್ ಕಾರ್ಯಕ್ರಮ ನಡೆಯಲಿದ್ದು, ಡಿ.ಕೆ. ಉಮ್ಮರ್ ಸಖಾಫಿ ಕಂಬಳಬೆಟ್ಟು ಮತ್ತು ಮಲ್ಲೂರು ಅಶ್ರಫ್ ಸಅದಿ ವಿಷಯ ಮಂಡನೆ ಮಾಡಲಿದ್ದಾರೆ. ರಾತ್ರಿ ನಡೆಯಲಿರುವ ಸಮಾರೋಪ ಸಮಾರಂಭವನ್ನು ಕರ್ನಾಟಕ ರಾಜ್ಯ ಜಂಇಯತುಲ್ ಉಲಮಾ ಅಧ್ಯಕ್ಷ ಮಾಣಿ ಅಬ್ದುಲ್ ಹಮೀದ್ ಮುಸ್ಲಿಯಾರ್ ಉದ್ಘಾಟಿಸಲಿದ್ದಾರೆ. ನೂರುಸ್ಸಾದಾತ್ ಬಾಯಾರ್ ಇಂಬಿಚ್ಚಿಕೋಯ ತಂಙಳ್ ಸನದು ದಾನಮ ಪ್ರದಾನ ಮಾಡಲಿದ್ದಾರೆ. ಪೆರೋಡ್ ಅಬ್ದುರ್ರಹ್ಮಾನ್ ಸಖಾಫಿ ಮುಖ್ಯ ಪ್ರಭಾಷಣ ಮಾಡಲಿದ್ದಾರೆ. ಕರ್ನಾಟಕ ಜಂಇಯತುಲ್ ಉಲಮಾ ಪ್ರಧಾನ ಕಾರ್ಯದರ್ಶಿ ಕೆ.ಪಿ.ಹುಸೈನ್ ಸಅದಿ, ಕರ್ನಾಟಕ ರಾಜ್ಯ ವಖಫ್ ಬೋರ್ಡ್ ಅಧ್ಯಕ್ಷ ಶಾಪಿ ಸಅದಿ, ಅಸ್ಸಯ್ಯಿದ್ ಅಲವಿ ಜಲಾಲುದ್ದೀನ್ ತಂಙಳ್ ಉಜಿರೆ ಮತ್ತಿತರರು ಅತಿಥಿಗಳಾಗಿ ಭಾವವಹಿಸಲಿದ್ದಾರೆ. ಈ ಸಂದರ್ಭದಲ್ಲಿ 10 ವಿದ್ಯಾರ್ಥಿಗಳಿಗೆ ಪದವಿ ಪ್ರದಾನ ಮಾಡಲಾಗುವುದು  ಎಂದು ತಿಳಿಸಿದರು.

ಸುದ್ದಿಗೋಷ್ಠಿಯಲ್ಲಿ ನೌಶದ್ ಸಖಾಫಿ ತಲಕ್ಕಿ, ನಿಸಾರ್ ಸಖಾಫಿ ಅಸ್ಸುಲ್ತಾನಿ ಉಳ್ಳಾಲ ಉಪಸ್ಥಿತರಿದ್ದರು. 

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News