×
Ad

ಉಳ್ಳಾಲ ದರ್ಗಾಕ್ಕೆ ಕನ್ನಡ ಸಾಹಿತಿ, ಕಲಾವಿದರ ಭೇಟಿ

Update: 2022-03-03 18:34 IST

ಉಳ್ಳಾಲ : ಉಳ್ಳಾಲ ಸೈಯ್ಯದ್ ಮದನಿಯವರ ಹೆಸರಲ್ಲಿ ನಡೆಸಲ್ಪಡುವ ಉಳ್ಳಾಲ ಉರೂಸ್ ಸಮಾರಂಭವೂ ಮದನಿ ತಂಙಳ್ ಆಶಯದಂತೆ ನಾಡಿನ  ಶಾಂತಿ, ಸೌಹಾರ್ದ, ಅಭಿವೃದ್ಧಿಗಾಗಿ ಆದ್ಯತೆ ನೀಡುತ್ತಿರುವುದು ಪ್ರಶಂಸನೀಯ ಎಂದು ಸಾಹಿತಿ ಮತ್ತು ಕನ್ನಡ ಸಾಹಿತ್ಯದ  ಪರಿಚಾರಕ  ಕಲ್ಲಚ್ಚು ಮಹೇಶ್ ಆರ್ ನಾಯಕ್  ಹೇಳಿದರು.

ಅವರು ಉಳ್ಳಾಲ ಉರೂಸಿನ ಕಾರ್ಯಕ್ರಮದಲ್ಲಿ ಪಾಲ್ಗೊಂಡು ಸನ್ಮಾನ ಸ್ವೀಕರಿಸಿ ಮಾತನಾಡುತ್ತಿದ್ದರು‌.

ದರ್ಗಾ ಅಧ್ಯಕ್ಷ ಅಬ್ದುಲ್ ರಶೀದ್ ಹಾಜಿಯವರು ಸರ್ವ ಶ್ರೀ ಮಹೇಶ್ ಆರ್ ನಾಯಕ್ ಮತ್ತು ಅವರೊಂದಿಗೆ ಆಗಮಿಸಿದ ಸಾಹಿತಿ ಪೌಲೋಸ್, ಕಲಾವಿದರುಗಳಾದ ಸಂತೋಷ್ ಮತ್ತು ನೇಮಿರಾಜ್ ಅವರನ್ನು ಅಭಿನಂದಿಸಿದರು.

ಕಾರ್ಯಕ್ರಮವನ್ನು ಉಳ್ಳಾಲ ದರ್ಗಾ ಮಾಧ್ಯಮ ಉಸ್ತುವಾರಿ ಫಾರೂಕ್ ಉಳ್ಳಾಲ್ ಮತ್ತು ಪರಿಸರಾಸಕ್ತ ಮಂಗಳೂರು ರಿಯಾಝ್ ಸಂಘಟಿಸಿದ್ದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News