×
Ad

ಸಿಖ್ ಸಮುದಾಯಕ್ಕೆ ಧಕ್ಕೆಯಾಗದಂತೆ ಸರಕಾರಿ ಆದೇಶ ಹೊರಡಿಸಿ: ಎಸ್. ಮಹೇಂದರ್ ಪಾಲ್ ಸಿಂಗ್ ಮನವಿ

Update: 2022-03-05 17:27 IST

ಬೆಂಗಳೂರು, ಮಾ.5: ಶೈಕ್ಷಣಿಕ ಸಂಸ್ಥೆಗಳು ಸೇರಿದಂತೆ ಸಾರ್ವಜನಿಕ ಸ್ಥಳಗಳಲ್ಲಿ ಅನಗತ್ಯ ವಿವಾದಗಳನ್ನು ಸೃಷ್ಟಿಯಾಗದಂತೆ ಹಾಗೂ ರಾಜ್ಯದ ಅಲ್ಪಸಂಖ್ಯಾತ ಸಿಖ್ ಸಮುದಾಯದ ನಂಬಿಕೆ ಮತ್ತು ಆಚರಣೆಗಳಿಗೆ ಧಕ್ಕೆಯಾಗದಂತೆ ಒಂದು ನಿರ್ದಿಷ್ಟ ಸರಕಾರಿ ಆದೇಶವನ್ನು ಹೊರಡಿಸಬೇಕು ಎಂದು ದಕ್ಷಿಣ ಪ್ರಾದೇಶಿಕ ಗುರು ಗೋಬಿಂದ್ ಸಿಂಗ್ ಸ್ಟಡಿ ಸರ್ಕಲ್‍ನ ಅಧ್ಯಕ್ಷ ಎಸ್. ಮಹೆಂದರ್ ಪಾಲ್ ಸಿಂಗ್ ಮನವಿ ಮಾಡಿದ್ದಾರೆ. 

ಶನಿವಾರ ಪ್ರೆಸ್‍ಕ್ಲಬ್‍ನಲ್ಲಿ ಮಾತನಾಡಿದ ಅವರು, ನಗರದ ಮೌಂಟ್ ಕಾರ್ಮೆಲ್ ಕಾಲೇಜಿನಲ್ಲಿ ಸಿಖ್ಖರ ಪೇಟ(ಟರ್ಬನ್) ಧರಿಸಿ ಬಂದ ಸಿಖ್ ವಿದ್ಯಾರ್ಥಿನಿಗೆ ತರಗತಿ ನಿರಾಕರಿಸಿ, ಸಿಖ್ ಸಮುದಾಯವನ್ನು ಅವಮಾನಗೊಳಿಸಿರುವ ಘಟನೆ ನಡೆದಿದೆ. ಮತ್ತೊಂದು ಕಡೆ ಸಿಖ್ ಸಮುದಾಯದವರಿಗೆ ಶಾಲೆಗೆ ಪ್ರವೇಶ ನೀಡಿಲ್ಲ. ಇಂತಹ ಅಹಿತಕರ ಘಟನೆಗಳು ನಡೆಯಬಾರದು ಎಂಬ ಉದ್ದೇಶದಿಂದ ಸರಕಾರ ಸೂಕ್ತ ನಿರ್ದೇಶನವನ್ನು ನೀಡಬೇಕು ಎಂದರು. 

ಈ ಕುರಿತು ರಾಜ್ಯದ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಹಾಗೂ ಶಿಕ್ಷಣ ಸಚಿವ ಬಿ.ಸಿ. ನಾಗೇಶ್ ಅವರಿಗೆ ಮನವಿ ಸಲ್ಲಿಸಿ, ಸಿಖ್ ಸಮುದಾಯದ ಧಾರ್ಮಿಕ ಆಚರಣೆಗಳಿಗೆ ಧಕ್ಕೆ ಬಾರದ ಹಾಗೆ ಸರಕಾರಿ ಆದೇಶವನ್ನು ಹೊರಡಿಸಿ ಎಂದು ಮನವಿ ಮಾಡಿದ್ದೇವೆ. ಅವರು ಮನವಿಯನ್ನು ಪುರಸ್ಕರಿಸಿ ಕ್ರಮ ವಹಿಸುತ್ತೇವೆ ಎಂದು ಹೇಳಿದ್ದಾರೆ ಎಂದು ಅವರು ಮಾಹಿತಿ ನೀಡಿದರು. 

ಗೋಷ್ಠಿಯಲ್ಲಿ ಸಿಖ್ ಸಮುದಾಯದ ಮುಖಂಡರಾದ ಎಸ್. ಇಂದ್ರಪಾಲ್ ಸಿಂಗ್, ಎಸ್. ಗರ್ಮಿಟ್ ಸಿಂಗ್, ಡಾ. ಹರ್ಮಿಂದರ್ ಸಿಂಗ್ ಮತ್ತಿತರರು ಉಪಸ್ಥಿತರಿದ್ದರು. 

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News