ಎಂ.ಕೆ. ಇಸ್ಮಾಯೀಲ್

Update: 2022-03-06 12:39 GMT

ಮಂಗಳೂರು, ಮಾ.6:ಪಾವೂರು ಗ್ರಾಮದ ಮಲಾರ್ ಕೆರೆಬಳಿ ನಿವಾಸಿ ಎಂ.ಕೆ. ಇಸ್ಮಾಯೀಲ್ ಯಾನೆ ಡ್ರೈವರ್ ಇಸ್ಮಾಯೀಲ್ (55) ಶನಿವಾರ ತಡರಾತ್ರಿ ತನ್ನ ಸ್ವಗೃಹದಲ್ಲಿ ಹೃದಯಾಘಾತದಿಂದ ನಿಧನರಾದರು.

ಡಿ.ಎಸ್. ಲಾರಿಯ ಮಾಲಕರಾಗಿದ್ದ ಮೃತರು ಪತ್ನಿ ಮತ್ತು ಇಬ್ಬರು ಪುತ್ರರು ಹಾಗೂ ಅಪಾರ ಬಂಧುಬಳಗವನ್ನು ಅಗಲಿದ್ದಾರೆ.

ಮಲಾರ್ ಅರಸ್ತಾನದ ಅಲ್ ಮುಬಾರಕ್ ಜುಮಾ ಮಸೀದಿಯ ಮಾಜಿ ಉಪಾಧ್ಯಕ್ಷರಾಗಿ ಸೇವೆ ಸಲ್ಲಿಸಿದ್ದ ಮೃತರು ಹಲವು ವರ್ಷಗಳಿಂದ ಕೆಂಪು ಕಲ್ಲಿನ ವ್ಯಾಪಾರದಲ್ಲಿ ತೊಡಗಿಸಿಕೊಂಡಿದ್ದರು.

ರವಿವಾರ ಅಲ್‌ಮುಬಾರಕ್ ಜುಮಾ ಮಸೀದಿಯ ಬಳಿ ದಫನ ಮಾಡಲಾಯಿತು ಎಂದು ಕುಟುಂಬಸ್ಥರು ತಿಳಿಸಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News

ವಸಂತಿ